ಚಿಕ್ಕಮಗಳೂರು :ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ ಸಡಿಲಿಕೆಯ ನಡುವೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೇಷ್ಟ್ರು ಎಂದೇ ಖ್ಯಾತಿಯನ್ನು ಪಡೆದಿರುವ ಮಾಜಿ ಶಾಸಕ ವೈ ಎಸ್ ವಿ ದತ್ತಾ ಅವರು ತಮ್ಮ ಫೇಸ್ಬುಕ್ ಖಾತೆ ಮೂಲಕ SSLC ಮಕ್ಕಳಿಗೆ ಟ್ಯೂಷನ್ ಕ್ಲಾಸ್ ತೆಗೆದುಕೊಂಡಿದ್ದಾರೆ.
SSLC ಮಕ್ಕಳಿಗೆ ಆನ್ಲೈನ್ನಲ್ಲೇ ಟ್ಯೂಷನ್ ಆರಂಭಿಸಿದ ಮಾಜಿ ಶಾಸಕ ವೈಎಸ್‌ವಿ ದತ್ತ ಮೇಷ್ಟ್ರು!! - SSLC ಮಕ್ಕಳಿಗೆ ಶಾಸಕರಿಂದ ಆನ್‌ಲೈನ್ ಪಾಠ
ಪ್ರತಿ ದಿನ ಸಂಜೆ 7:30 ರಿಂದ 8:30ರವರೆಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಾರೆ. ಒಂದು ವಾರ ಗಣಿತ, ಇನ್ನೊಂದು ವಾರ ಭೌತಶಾಸ್ತ್ರ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದಾರೆ.
ಶಾಸಕರಿಂದ ಮಕ್ಕಳಿಗೆ ಪಾಠ
ಪ್ರತಿ ದಿನ ಸಂಜೆ 7:30 ರಿಂದ 8:30ರವರೆಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಾರೆ. ಒಂದು ವಾರ ಗಣಿತ, ಇನ್ನೊಂದು ವಾರ ಭೌತಶಾಸ್ತ್ರ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಕಡೂರು ತಾಲೂಕಿನ ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ತಮ್ಮ ಫೇಸ್ ಬುಕ್ ಖಾತೆಯ ಮೂಲಕವೇ ಲೈವ್‌ನಲ್ಲಿ ಮಕ್ಕಳಿಗೆ ಗಣಿತ ಹೇಳಿಕೊಡ್ತಾರೆ.
ಸದ್ಯದಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕ ನಿಗದಿ ಆಗುವ ಕಾರಣದಿಂದಾಗಿ ಎರಡು ವಾರಗಳ ಕಾಲ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ ಮಾಡ್ತಿದ್ದಾರೆ.
Last Updated : May 7, 2020, 5:44 PM IST