ಚಿಕ್ಕಮಗಳೂರು:ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಕುರಿತು ಶಾಸಕ ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದ್ದು, ಸಚಿವ ಈಶ್ವರಪ್ಪ ರಾಜೀನಾಮೆ ಕುರಿತು ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುವರು. ಇದಕ್ಕೆ ಡಿವೈಎಸ್ಪಿ ಗಣಪತಿ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಹೋಲಿಕೆ ಮಾಡಲು ಬರುವುದಿಲ್ಲ. ಸಮಾಜದಲ್ಲಿ ಸತ್ತವರ ಪರ ಸ್ವಾಭಾವಿಕವಾಗಿ ಸಿಂಪಥಿ ಇರುತ್ತೆ. ನಾನು ಶಾಸಕನಾಗಿ ರಿಸ್ಕ್ ತೆಗೆದುಕೊಂಡು 5-10 ಲಕ್ಷದ ಕೆಲಸ ಮಾಡಿಸಿದ್ದೇನೆ. ಕೋಟಿಗಟ್ಟಲೆ ಕಾಮಗಾರಿಯನ್ನು ಮಂಜೂರು ಪಡೆದುಕೊಳ್ಳದೇ ಕೆಲಸ ಮಾಡೋಕೆ ಬರುತ್ತಾ? ಎಂದು ಅವರು ಪ್ರಶ್ನಿಸಿದರು.
ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತ ಇರೋದು ಸ್ಪಷ್ಟ. ಸಂತೋಷರನ್ನು ನಮ್ಮ ಪಕ್ಷದ ಕಾರ್ಯಕರ್ತ ಅಂತಾನೂ ಹೇಳುತ್ತಾರೆ. ರಾಹುಲ್ ಗಾಂಧಿ ಸಹಿ ಬಳಸಿಕೊಂಡು ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಟಿಕೆಟ್ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದ ಅಂತಾ ಕೂಡ ಹೇಳುತ್ತಾರೆ. ಸಾವು ದುರದೃಷ್ಟಕರ, ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.