ಕರ್ನಾಟಕ

karnataka

ETV Bharat / state

ಎಂ ಬಿ ಪಾಟೀಲ್​ ವಿರುದ್ಧ ಸಿ ಟಿ ರವಿ ತಿರುಗೇಟು.. ಸವಾಲು ಸ್ವೀಕರಿಸಲು ಸಿದ್ಧವೆಂದು ಟಾಂಗ್​ - chikkmagaluru news

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದ ಸಿ ಟಿ ರವಿ ವಿರುದ್ಧ ಇದನ್ನ ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂದು ಎಂ ಬಿ ಪಾಟೀಲ್ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಶಾಸಕ ಸಿಟಿ ರವಿ
ಶಾಸಕ ಸಿಟಿ ರವಿ

By

Published : Dec 4, 2022, 6:46 PM IST

Updated : Dec 4, 2022, 9:40 PM IST

ಚಿಕ್ಕಮಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರಿಗೆ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್​ ಎಚ್ಚರಿಕೆ ನೀಡಿದ್ದರು. ಇಂತಹ ಹೇಳಿಕೆಗಳನ್ನು ಮುಂದುವರಿಸಿದರೆ ಮನೆಯಿಂದ ಹೊರಗೆ ಓಡಾಡುವುದು ಕಷ್ಟವಾಗಬಹುದು ಎಂಬ ಹೇಳಿಕೆಗೆ ರವಿ ಟಾಂಗ್​ ಕೊಟ್ಟಿದ್ದಾರೆ.

ಬೆದರಿಕೆ ಹಾಕ್ತಾರಾ, ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯೋಲ್ಲ. ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ. ಪಾಳೆಗಾರ ಮನೆತನದವನಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಂಬೇಡ್ಕರ್ ಕೊಟ್ಟಿದ್ದು ಒಂದೇ ವೋಟ್. ಈ ಪಾಗಾರಿಕೆ ಮನಸ್ಥಿತಿಯನ್ನು ಎಂ.ಬಿ. ಪಾಟೀಲರು ಬದಲಾಯಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಸಿ ಟಿ ರವಿ

ನಂತರ ಮಾತನಾಡಿ, ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ. ನಿಮ್ಮೂರಿಗೆ ಬರ್ತೀನಿ ನಾನು ಏನೂ ಹೇಳಬೇಕು ಅಂದುಕೊಂಡಿದ್ದೇನೆಯೋ ಅದನ್ನು ನಿಮ್ಮೂರಿನಲ್ಲೇ ಹೇಳುತ್ತೇನೆ. ನಿಮ್ಮ‌ ಮುಖದ ಎದುರೇ ಹೇಳುತ್ತೇನೆ, ನಿಮ್ಮಷ್ಟು ಶ್ರೀಮಂತಿಕೆ ನನ್ನ ಬಳಿ ಇಲ್ಲವೆಂದು ನನಗೆ ಗೊತ್ತು. ಆದರೆ ನಿಮ್ಮ ಶ್ರೀಮಂತಿಕೆ ದರ್ಪವನ್ನು ಜನರ ಮೇಲೆ ತೋರಿಸಬೇಡಿ ಎಂದು ಸಿ ಟಿ ರವಿ ಹೇಳಿದರು.

ಅಮಾಯಕರು ಅಂತ ಸರ್ಟಿಫಿಕೇಟ್ ಕೊಡುವವರಿಗೆ ಮತ ಹಾಕಿದರೆ ಅವರು ಉಳಿಯಲ್ಲ ದೇಶವೂ ಉಳಿಯಲ್ಲ:

ವಿವಾದಾತ್ಮಕ ಗೋಡೆ ಬರಹದ ಕುರಿತು ಮಾತನಾಡಿದ ಶಾಸಕ ಸಿಟಿ ರವಿ, ಪಿಎಫ್​ಐ, ಸಿಎಫ್​ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇನ್ನೂ ಇದ್ದಾರೆ. ಇದು ಇಂದು ನಿನ್ನೆಯಿಂದಲ್ಲ 7ನೇ ಶತಮಾನದಿಂದಲೂ ಆ ಮನಸ್ಥಿತಿ ಇದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟು ಹಾಕಬೇಕೆಂದು ಗಜಾವಹಿಂದ್ ಹೆಸರಲ್ಲಿ 7ನೇ ಶತಮಾನದಿಂದ ಶುರುವಾದದ್ದು ಎಂದರು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ಆ ಮನಸ್ಥಿತಿಯ ಕಾರಣಕ್ಕೆ ಜಿನ್ನಾ ಭಾರತ ವಿಭಜನೆಗೆ ಕೈ ಹಾಕಿದ್ದು. ಆ ಮನಸ್ಥಿತಿಯ ಜನ ಇರುವವರೆಗೂ ಈ ರೀತಿ ಮಾಡುತ್ತಿರುತ್ತಾರೆ. ವೋಟಿನ ಆಸೆಗೆ ಜೊಲ್ಲು ಸುರಿಸಿಕೊಂಡು ತನ್ನದೆ ಶಾಸಕನ ಮನೆಗೆ ಬೆಂಕಿ ಹಾಕಿದ್ದರು. ಆಗ ಅವರು ಅಮಾಯಕರು ಅಂತ ಸರ್ಟಿಫಿಕೇಟ್ ಕೊಡುವವರಿಗೆ ಮತ ಹಾಕಿದರೆ ಅವರು ಉಳಿಯಲ್ಲ ದೇಶವೂ ಉಳಿಯಲ್ಲ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

ಇದನ್ನೂ ಓದಿ:ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಮುಖಂಡ ತಾಳಿಕಟ್ಟೆ ಲೋಕೇಶ್ ವಾಗ್ದಾಳಿ

Last Updated : Dec 4, 2022, 9:40 PM IST

ABOUT THE AUTHOR

...view details