ಚಿಕ್ಕಮಗಳೂರು:ಚಿಕ್ಕಮಗಳೂರು ತಾಲೂಕಿನ ಲಕ್ಕಮ್ಮನ ಹಳ್ಳಿಯಲ್ಲಿ ನಡೆದ ಯುವಸಂಜೆ ಕಾರ್ಯಕ್ರಮದಲ್ಲಿ ‘‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’’ ಹಾಡಿಗೆ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ತಮ್ಮ ನೆಚ್ಚಿನ ನಾಯಕ ಹಾಡಿಗೆ ಹೆಜ್ಜೆ ಹಾಕುತ್ತಲೇ ಅಕ್ಕ - ಪಕ್ಕದಲ್ಲಿದ್ದ ಯುವಕರು ಕೂಡ ಹುಚ್ಚೆದ್ದು ಕುಣಿದಿದ್ದಾರೆ. ಇದಿಷ್ಟೇ ಅಲ್ಲದೇ ಚಿಕ್ಕಮಗಳೂರು ತಾಲೂಕಿನ ಕೇತಮಾರನಹಳ್ಳಿಯ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಸಿ.ಟಿ.ರವಿ ಅಲ್ಲಿಯೂ ಕೂಡ ತಮ್ಮಲ್ಲಿ ಒಳ್ಳೆಯ ನೃತ್ಯಗಾರ ಇದ್ದಾನೆ ಅನ್ನೋದನ್ನ ಜನರಿಗೆ ಮನದಟ್ಟು ಮಾಡಿದ್ದಾರೆ.