ಚಿಕ್ಕಮಗಳೂರು :ಕಾಶ್ಮೀರ ಕಣಿವೆಯಲ್ಲಾದ ಬ್ರಾಹ್ಮಣರ ಹತ್ಯಾಕಾಂಡ ಕುರಿತು ಚಿತ್ರಿಸಲಾದ 'ದಿ ಕಾಶ್ಮೀರ ಫೈಲ್ಸ್' ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಿಡಿಕಾರಿದ್ದಾರೆ.
ಕಾಶ್ಮೀರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಕ್ಕಳಿದ್ದರೂ ಕೂಡ ಅವರು ಸಿದ್ದರಾಮಯ್ಯ ಅವರ ಹೆಸರೇಳಿಕೊಂಡೂ ಬದುಕಲು ಅಸಾಧ್ಯ. ಸಿದ್ರಾಮುಲ್ಲಾ ಖಾನ್ ಎಂದೇ ಹೇಳಬೇಕಿತ್ತು ಎಂದು ಟೀಕಿಸಿದರು.
ಕಾಶ್ಮೀರಿ ಫೈಲ್ಸ್ ಸತ್ಯದ ಘಟನೆಗಳ ಆಧಾರಿತ ಸಿನಿಮಾ. ಸಿದ್ದರಾಮಯ್ಯ ಅವರು ವಕೀಲರು ಮತ್ತು ಬುದ್ಧಿವಂತರಿದ್ದಾರೆ. ಸಿನಿಮಾದ ಘಟನೆಗಳ ಬಗ್ಗೆ ಆಕ್ಷೇಪ ಇರುವವರಿಗೆ ಆಯಾ ಕಾಲಘಟ್ಟದ ಸರ್ಕಾರಿ ದಾಖಲೆಗಳನ್ನು ಪರಿಗಣಿಸಿದರೆ ಸತ್ಯ ಅರಿವಾಗುತ್ತದೆ. ಸಿನಿಮಾದ ಸತ್ಯವನ್ನು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದರು.