ಚಿಕ್ಕಮಗಳೂರು: ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡುತ್ತಾರೆ. ಮದ್ಯ ಸೇವಿಸಿದ್ದಾರೆ ಅನ್ನೋದು ಶುದ್ಧ ಸುಳ್ಳು, ಮಾಧ್ಯಮಗಳಲ್ಲಿ ಮದ್ಯ ಸೇವಿಸಿದ್ದಾರೆ ಅನ್ನೋದನ್ನ ನೋಡಿ ನನಗೆ ಬೇಸರದ ಜೊತೆಗೆ ಶಾಕ್ ಕೂಡ ಆಗಿದೆ ಎಂದು ಶಾಸಕ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರು ಅಪಘಾತ: ಶಾಸಕ ಸಿ.ಟಿ. ರವಿ ಪತ್ನಿ ಪ್ರತಿಕ್ರಿಯೆ ಹೀಗಿದೆ - undefined
ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡುತ್ತಾರೆ. ಮದ್ಯ ಸೇವಿಸಿದ್ದಾರೆ ಅನ್ನೋದು ಶುದ್ಧ ಸುಳ್ಳು, ಮದ್ಯ ಸೇವಿಸಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ನನಗೆ ಬೇಸರದ ಜೊತೆಗೆ ಶಾಕ್ ಕೂಡ ಆಗಿದೆ ಎಂದು ಶಾಸಕ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ.

http://10.10.50.85:6060//finalout4/karnataka-nle/thumbnail/19-February-2019/2492603_1082_f19e3da2-6c1c-4467-b5c1-bac1856d7c36.png
ಶಾಸಕ ಸಿ.ಟಿ. ರವಿ ಪತ್ನಿ ಪ್ರತಿಕ್ರಿಯೆ
ಶಾಸಕ ಸಿ.ಟಿ. ರವಿ ಕಾರು ಡಿಕ್ಕಿ ಪ್ರಕರಣ ಸಂಬಂಧ ಚಿಕ್ಕಮಗಳೂರಿನಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಇನ್ನು ನನ್ನ ಪತಿ ನೀರನ್ನು ಬಿಟ್ಟು, ಬೇರೆ ಕುಡಿದಿರೋದನ್ನು ನಾನು ನೋಡಿಲ್ಲ ಎಂದರು.
ನಮ್ಮ ಕಾರಿನ ಚಾಲಕ ಕೂಡ ಮದ್ಯ ಸೇವನೆ ಮಾಡಲ್ಲ. ರಾತ್ರಿ 12 ಗಂಟೆಗೆ ಅವರು ಮನೆ ಬಿಟ್ಟಿದ್ದರು. ಈ ಘಟನೆಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಅದು ನಿಜವಾಗಿಯೂ ಬೇಸರದ ವಿಷಯ. ಈ ಅಪಘಾತ ಆಕಸ್ಮಿಕವಾದುದು, ಮೃತ ಯುವಕರ ಕುಟುಂಬಸ್ಥರ ಮನೆಗೆ ಹೋಗಿ ಸಾಂತ್ವನ ಹೇಳುತ್ತೇವೆ ಎಂದು ಪಲ್ಲವಿ ರವಿ ಹೇಳಿದರು.