ಕರ್ನಾಟಕ

karnataka

ETV Bharat / state

ಗುಜರಾತ್​ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಶಾಸಕ ಸಿ ಟಿ ರವಿ ವಿಶ್ವಾಸ

ಈ ಹಿಂದೆ ನನ್ನನ್ನು ಕುಡುಕ ಅಂತಾ ಹೇಳಿದ್ದರು. ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಇದ್ಯಾ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದವನು ನಾನು ಎಂದು ಶಾಸಕ ಸಿ ಟಿ ರವಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಶಾಸಕ ಸಿ ಟಿ ರವಿ
ಶಾಸಕ ಸಿ ಟಿ ರವಿ

By

Published : Dec 5, 2022, 6:43 PM IST

ಚಿಕ್ಕಮಗಳೂರು:ಗುಜರಾತಿನಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುತ್ತೆ. ಹಿಂದಿನ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಶಾಸಕ ಸಿ ಟಿ ರವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕ ಸಿ ಟಿ ರವಿ ಅವರು ಮಾತನಾಡಿದರು

ನಗರದಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ತೆಗೆದುಕೊಂಡ ಸೀಟಿಗಿಂತ ಹೆಚ್ಚು ಸ್ಥಾನ ಬರುತ್ತೆ. ನಾಮ್ ಮತ್ತು ಕಾಮ್ ಇವೆರಡರ ಆಧಾರದಲ್ಲಿ ಜನ ಮತ ಹಾಕುತ್ತಾರೆ. ಪ್ರಧಾನಿ ಮೋದಿ, ಗುಜರಾತ್ ಸರ್ಕಾರದ ಸಾಧನೆ ನೋಡಿ ಜನರು ಮತ ಹಾಕ್ತಾರೆ. ಚುನಾವಣಾ ಫಲಿತಾಂಶದಿಂದ ರಾವಣ ಯಾರು? ರಾಮ ಯಾರು? ಎನ್ನುವುದು ಗೊತ್ತಾಗುತ್ತದೆ. ರಾಮ ಮತ್ತೆ ಗೆದ್ದು ಬರ್ತಾನೆ. ರಾಮನ ಹಿಂಬಾಲಿಸುವ ಪಕ್ಷ ಮತ್ತೆ ಗೆದ್ದೆ ಬರುತ್ತದೆ. ರಾವಣ ಶಕ್ತಿಗಳು ನಾಶವಾಗುತ್ತದೆ. ಖರ್ಗೆಯವರಿಗೆ ಚಿಂತೆ ಬೇಡ, ರಾವಣನ ನಾಶ ಶತಃಸಿದ್ಧ ಎಂದು ಹೇಳಿದರು.

ಕ್ಲೀನ್ ಚಿಟ್ ನಾನು ಕೊಟ್ಟಿಲ್ಲ:ಎಲ್ಲ ರೌಡಿಶೀಟರ್​ಗಳು ರೌಡಿಗಳಲ್ಲ ಎಂದು ಹೇಳಿದ್ದೆ. ರೌಡಿಶೀಟರ್​ನಲ್ಲಿರೋ ಎಲ್ಲರಿಗೂ ಕ್ಲೀನ್ ಚಿಟ್ ನಾನು ಕೊಟ್ಟಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ ಟಿ ರವಿ ಹೇಳಿದ್ದಾರೆ. ನಿಮ್ಮ ಪಕ್ಷದ ಆರ್ ವಿ ದೇವರಾಜ್, ಹರಿಪ್ರಸಾದ್ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಲಿ. ಸಾವಿರಾರು ಜನರನ್ನ ರಾಜಕೀಯ ಕಾರಣಕ್ಕೆ ರೌಡಿ ಶೀಟ್ ನಲ್ಲಿ ಸೇರಿಸಲಾಗುತ್ತದೆ. ಅವರು ಯಾರೂ ರೌಡಿಗಳಾಗಿರುವುದಿಲ್ಲ. ಅವರ ಬಗ್ಗೆ ಹೇಳಿದ್ದೇನೆ. ವೃತ್ತಿಯನ್ನೇ ಹಫ್ತಾ, ಬೆದರಿಕೆ ಮಾಡಿಕೊಂಡಿರಿರುವವ ಬಗ್ಗೆ ನಾನೆಂದೂ ಕ್ಲೀನ್‌ಚಿಟ್ ಕೊಡಲ್ಲ ಎಂದರು.

ನನ್ನನ್ನು ಕುಡುಕ ಅಂತಾ ಹೇಳಿದ್ರು: ರಾಜಕೀಯ ಕಾರಣಕ್ಕೆ ರೌಡಿ‌ಶೀಟರ್ ಸೇರಿಸಿರುವವರ ಬಗ್ಗೆ ಹೇಳಿದ್ದೇನೆ. ಈ ಹಿಂದೆ ನನ್ನನ್ನು ಕುಡುಕ ಅಂತಾ ಹೇಳಿದ್ರು. ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಇದೆಯಾ?. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದವನು ನಾನು. ಇದು ಕಾಂಗ್ರೆಸ್ ನ ಮನಸ್ಥಿತಿಯನ್ನ ತೋರಿಸುತ್ತೆ. ತಾನು ಕಳ್ಳ, ಪರರ ನಂಬಲ್ಲ ಅನ್ನೋ ಮನಸ್ಥಿತಿ ಕಾಂಗ್ರೆಸ್ ನದ್ದು. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ಗಂಟೆ ತನಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದರು.

ಓದಿ:ಯಾವುದೇ ರಾಜ್ಯಕ್ಕೂ ಅನ್ಯಾಯವಾಗಲು ನಾವು ಅವಕಾಶ ನೀಡಲ್ಲ.. ಜನ ಸಂಯಮದಿಂದ ವರ್ತಿಸಬೇಕು: ಸಿ ಟಿ ರವಿ

ABOUT THE AUTHOR

...view details