ಚಿಕ್ಕಮಗಳೂರು: ಜನ ಮಾತ್ರವಲ್ಲ, ಮಹಾರಾಷ್ಟ್ರ ಸರ್ಕಾರದ ಬಗ್ಗೆ 3 ಪಕ್ಷದ ಶಾಸಕರು ಭ್ರಮ ನಿರಸರಾಗಿದ್ದಾರೆ. ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಲಿ ಎಂದು ಬಯಸಿರುವುದಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಸಿ.ಟಿ.ರವಿ ತಿಳಿಸಿದರು.
ಮಹಾರಾಷ್ಟ್ರದಲ್ಲಿರುವುದು ತತ್ವಹೀನ ಸರ್ಕಾರ: ಶಾಸಕ ಸಿ.ಟಿ.ರವಿ - ಮಹಾರಾಷ್ಟ್ರ ಸರ್ಕಾರ ಕುರಿತು ಸಿ ಟಿ ರವಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ
ಮಹಾರಾಷ್ಟ್ರ ಸರ್ಕಾರ ತತ್ವಹೀನ ಸರ್ಕಾರ. ಸಿದ್ಧಾಂತ, ಅಭಿವೃದ್ಧಿ ಯೋಜನೆಗಳು ಇಲ್ಲವೇ ಇಲ್ಲ. ಈ ಸರ್ಕಾರ ಬೀಳಲಿ ಅಂತ ಜನ, ಶಾಸಕರು ಬಯಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಶಾಸಕ ಸಿ ಟಿ ರವಿ
ಇದು ಯಾವ ತಾಳಮೇಳವೂ ಇಲ್ಲದ ಅಪವಿತ್ರ ಮೈತ್ರಿ ಸರ್ಕಾರ. ಸೈದ್ಧಾಂತಿಕವಾಗಿಯೂ ಮಿಸ್ ಮ್ಯಾಚ್ ಡಿ.ಎನ್.ಎ ಸರ್ಕಾರ. ಬಿಜೆಪಿ ಗೆಲುವಿಗೆ ಸಹಕರಿಸಿದ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕೆಂದು ಚುನಾವಣೆ ಸಂದರ್ಭದಲ್ಲೇ ಅಪೇಕ್ಷೆ ಇತ್ತು. 2019ರಲ್ಲಿ ಜನ ಮತ ಹಾಕಿದ್ದು ಮೋದಿ, ಫಡ್ನವಿಸ್ ನೇತೃತ್ವದ ಸರ್ಕಾರಕ್ಕೆ ಎಂದು ಅವರು ಹೇಳಿದರು.
ಇದನ್ನೂಓದಿ:ಅಗ್ನಿಪಥ ಯೋಜನೆಗೆ ವಿರೋಧ: ನಾಳೆ ದೆಹಲಿಯಲ್ಲಿ ರಾಜ್ಯ 'ಕೈ' ನಾಯಕರಿಂದ ಪ್ರತಿಭಟನೆ