ಕರ್ನಾಟಕ

karnataka

ETV Bharat / state

ನಾವು ಹಗಲುಗನಸನ್ನು ನನಸು ಮಾಡುವ ಜನ: ಸಾಂದರ್ಭಿಕ ಶಿಶುವಿಗೆ ಸಿ ಟಿ ರವಿ ಟಾಂಗ್​

ಆನಂದ್​ ಸಿಂಗ್​ ರಾಜೀನಾಮೆಗೆ ಅವರದೇ ಆದ ರಾಜಕೀಯ ಕಾರಣಗಳಿರಬಹುದು. ಜಿಂದಾಲ್ ಭೂಮಿ ಪರಭಾರೆ ವಿರೋಧಿಸಿ ಚಳವಳಿ ಮಾಡುವುದಾಗಿ ಹೇಳಿದ್ದರು. ಸದ್ಯ ಕಾಂಗ್ರೆಸ್​ ರಾಷ್ಟ್ರೀಯ​ ಅಧ್ಯಕ್ಷರೇ ಹತಾಶ ಸ್ಥಿತಿಯಲ್ಲಿರುವಾಗ ಆ ಪಕ್ಷದ ಶಾಸಕರಿಗೂ ಭಯ ಕಾಡುತ್ತಿದೆ ಎಂದು ಶಾಸಕ ಸಿ ಟಿ ರವಿ ಹೇಳಿದ್ರು. ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಟ್ವೀಟ್​​ ವಿಚಾರಕ್ಕೆ ಸಂಬಂಧಿಸಿದಂತೆ ರವಿ ಟಾಂಗ್​ ಕೊಟ್ಟಿದ್ದಾರೆ.

ಶಾಸಕ ಸಿ ಟಿ ರವಿ

By

Published : Jul 1, 2019, 5:54 PM IST

ಚಿಕ್ಕಮಗಳೂರು:ಶಾಸಕ ಆನಂದ್ ಸಿಂಗ್ ಯಾವ ಕಾರಣಕ್ಕಾಗಿ ರಾಜೀನಾಮೇ ನೀಡಿದ್ದಾರೆ ಎಂಬುದು ಗೊತ್ತಿಲ್ಲವೆಂದು ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಆನಂದ್ ಸಿಂಗ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ಅವರಿಗೆ ಫೋನ್ ಮಾಡಿದ್ದೆ. ಅದರೆ ಸ್ವಿಚ್​ ಆಫ್​ ಆಗಿದೆ, ರಾಜೀನಾಮೆಗೆ ಅವರದೇ ಆದ ರಾಜಕೀಯ ಕಾರಣಗಳಿರಬಹುದು. ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ವಿರೋಧಿಸಿ ಚಳವಳಿ ಮಾಡುವುದಾಗಿ ಹೇಳಿದ್ದರು. ಅದೇ ಕಾರಣಕ್ಕೆ ರಾಜೀನಾಮೆ ನೀಡಿರಬಹುದು. ಇನ್ನು ಎಐಸಿಸಿ ಅಧ್ಯಕ್ಷರೇ ​ಹತಾಶ ಮನಸ್ಥಿತಿಯಲ್ಲಿದ್ದು, ಅವರ ರಾಜೀನಾಮೆ ನಿರ್ಧಾರದಿಂದ ಕಾಂಗ್ರೆಸ್​​ನ ಶಾಸಕರೆಲ್ಲರೂ ರಾಜೀನಾಮೆ ನೀಡುತ್ತಿದ್ದಾರೆ ಎಂದರು.

ಶಾಸಕ ಸಿ ಟಿ ರವಿ, ಶಾಸಕ

ಕಾಂಗ್ರೆಸ್​​ನಲ್ಲಿ ರಾಜಕೀಯ ಭವಿಷ್ಯ ಇಲ್ಲ ಅಂತ ಅವರಿಗೆ ಹತಾಶೆ ಭಾವನೆ ಮೂಡಿದ್ದರೆ ನಾವು ಏನು ಮಾಡಲು ಸಾಧ್ಯ ಎಂದು ರವಿ ಪ್ರಶ್ನಿಸಿದರು. ಇನ್ನು ಬಿಜೆಪಿ ಪ್ರಯತ್ನ ನಿರಂತರ ಹಗಲುಗನಸು ಎಂದು ಟ್ವೀಟ್​ ಮಾಡಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್​ ನೀಡಿರುವ ಸಿ ಟಿ ರವಿ, ನಾವು ಹಗಲುಗನಸನ್ನು ನನಸು ಮಾಡುವ ಜನ. ಸಿಎಂ ಕಾಕತಾಳೀಯವಾಗಿ ಸಾಂದರ್ಭಿಕ ಶಿಶು ಅಂತಾ ಹೇಳಿಕೊಂಡಿದ್ದರು ಎಂದು ಕಾಲೆಳೆದರು.

ಜೆಡಿಎಸ್ ನವರಿಗೆ ಕಾಂಗ್ರೆಸ್​​ನವರ ಮೇಲೆ ನಂಬಿಕೆಯಿಲ್ಲ. ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಿ ತೆಗೆದು, ಈಗ ಮತ್ತೆ ಸಚಿವಸ್ಥಾನ ನೀಡಿದ್ದಾರೆ. ಅದು ನಾವು ಹೇಳಿದ್ದಲ್ಲ ಹಾಗಂತ ಬಿ ಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದರು ಎಂದರು.

ರಮೇಶ್ ಜಾರಕೀಹೊಳಿ ಅವರಿಗೆ ಡಿ ಕೆ ಶಿವಕುಮಾರ್ ಅವರ ಮೇಲೆ ಅಸಮಾಧಾನ ಇದೆ, ಜಿಂದಾಲ್ ವಿಷಯದಲ್ಲಿ ಸರ್ಕಾರ ತಪ್ಪು ಮಾಡುತ್ತಿದೆ ಅಂತ ಆನಂದ್ ಸಿಂಗ್ ಹೇಳಿದ್ದಾರೆ. ಅದಕ್ಕೆ ಅವರು ರಾಜೀನಾಮೆ ನೀಡಿರಬಹುದು. ಸದ್ಯದ ಪರಿಸ್ಥಿತಿಗೆ ಮೈತ್ರಿ ಸರ್ಕಾರವೇ ಹೊಣೆ ಬಿಜೆಪಿಯಲ್ಲ ಎಂದು ಶಾಸಕ ಸಿ ಟಿ ರವಿ ಸ್ಪಷ್ಟಪಡಿಸಿದರು.

ABOUT THE AUTHOR

...view details