ಕರ್ನಾಟಕ

karnataka

ETV Bharat / state

ದತ್ತಪೀಠದಲ್ಲಿರುವ ಅನಗತ್ಯ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ : ಸಚಿವ ಸುನೀಲ್ ಕುಮಾರ್ - Chikkamagalur latest update news

ಮುಸಲ್ಮಾನರು ಕಣ್ತೆರೆದು ನೋಡಬೇಕು. ನಿಮ್ಮ ನಾಗೇನಹಳ್ಳಿಯ ದರ್ಗಾವನ್ನು ನೀವು ಅಭಿವೃದ್ಧಿ ಮಾಡಿ. ದತ್ತಪೀಠದ ಹೋರಾಟದ ಮೂಲಕವೇ ನಾನು ಗುರುತಿಸಿಕೊಂಡಿದ್ದೇನೆ. ಹೈಕೋರ್ಟ್ ಹಿಂದೂಗಳ ಭಾವನೆಗಳ ಪರವಾದ ತೀರ್ಪನ್ನು ಕೊಟ್ಟಿದೆ. ನಾನು ಮಂತ್ರಿಯಾದ ಸಂದರ್ಭದಲ್ಲಿ ಈ ತೀರ್ಪು ನೀಡಿರುವುದು ನನ್ನ ಜೀವನದ ಯೋಗ..

Minister Sunil Kumar
ಸಚಿವ ಸುನೀಲ್ ಕುಮಾರ್

By

Published : Oct 4, 2021, 3:54 PM IST

ಚಿಕ್ಕಮಗಳೂರು :ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಮಾಡಿ ಕೊಡಬೇಕು. ಹೈಕೋರ್ಟ್ ನಿರ್ದೇಶನದ ಪರವಾಗಿ ನಾನು ಸೂಚನೆ ನೀಡುತ್ತೇನೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ದತ್ತ ಪೀಠ ವಿವಾದ : ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿರುವುದು

ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠಕ್ಕೆ ಭೇಟಿ ನೀಡಿದ ಸಚಿವ ಸುನೀಲ್‌ಕುಮಾರ್, ದತ್ತಾತ್ರೇಯ ಪೀಠ ಬೇರೆ. ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್ ದರ್ಗಾ‌ ಬೇರೆ. ಈ ವಿಚಾರ ದಾಖಲೆಗಳಲ್ಲಿ ಸಾಬೀತಾಗಿದೆ. ದತ್ತಪೀಠದಲ್ಲಿ ಹಿಂದೂಗಳಿಂದಲೇ ಪೂಜೆಯಾಗಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.

ಮುಸಲ್ಮಾನರು ಕಣ್ತೆರೆದು ನೋಡಬೇಕು. ನಿಮ್ಮ ನಾಗೇನಹಳ್ಳಿಯ ದರ್ಗಾವನ್ನು ನೀವು ಅಭಿವೃದ್ಧಿ ಮಾಡಿ. ದತ್ತಪೀಠದ ಹೋರಾಟದ ಮೂಲಕವೇ ನಾನು ಗುರುತಿಸಿಕೊಂಡಿದ್ದೇನೆ. ಹೈಕೋರ್ಟ್ ಹಿಂದೂಗಳ ಭಾವನೆಗಳ ಪರವಾದ ತೀರ್ಪನ್ನು ಕೊಟ್ಟಿದೆ. ನಾನು ಮಂತ್ರಿಯಾದ ಸಂದರ್ಭದಲ್ಲಿ ಈ ತೀರ್ಪು ನೀಡಿರುವುದು ನನ್ನ ಜೀವನದ ಯೋಗ. ಈ ಹಿನ್ನೆಲೆಯಲ್ಲಿ ಅತ್ಯಂತ ಸಂತೋಷದಿಂದ ದತ್ತಾತ್ರೇಯನ ದರ್ಶನ ಮಾಡಿದ್ದೇನೆ ಎಂದರು.

ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ವಿರುದ್ಧದ ನಿರ್ಣಯ ತೆಗೆದುಕೊಂಡಿತ್ತು. ಮುಜಾವರ್ ನೇಮಕ ಮಾಡಿ ಹಿಂದೂ ವಿರೋಧಿಯಾಗಿ ನಡೆದುಕೊಂಡಿತ್ತು. ಈಗ ನ್ಯಾಯಾಲಯ ನಮ್ಮ ಪರವಾದ ತೀರ್ಪನ್ನು ನೀಡಿದೆ. ದತ್ತಪೀಠದಲ್ಲಿ ಮುಜಾವರ್ ಪೂಜೆ ಮಾಡುವುದಲ್ಲ, ಹಿಂದೂ ಅರ್ಚಕರು ಪೂಜೆ ಮಾಡಬೇಕೆಂದು ಕೋರ್ಟ್ ಹೇಳಿದೆ. ಹಿಂದೂಗಳ‌ ಭಾವನೆಗಳ ಪರವಾಗಿ ನಮ್ಮ ಸರ್ಕಾರ ನಿಲ್ಲುತ್ತದೆ ಎಂದು ದತ್ತಪೀಠದಲ್ಲಿ ಸಚಿವ ಸುನಿಲ್ ಕುಮಾರ್ ಹೇಳಿದರು.

ABOUT THE AUTHOR

...view details