ಕರ್ನಾಟಕ

karnataka

ETV Bharat / state

ಹುಣಸೋಡು ಸ್ಫೋಟದ ಬಗ್ಗೆ ತಜ್ಞರ ವರದಿಗೆ ಕಾಯಲಾಗುತ್ತಿದೆ; ಆರ್. ಅಶೋಕ್ - ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ

ಜಿಲೆಟಿನ್ ಕಡ್ಡಿಗಳು ಮೈನಿಂಗ್​​ ಪ್ರದೇಶಕ್ಕೆ ಬಂದಿದ್ದು, ಬೇರೆ ಉದ್ದೇಶಕ್ಕಾದರೆ ದೊಡ್ಡ ಅನಾಹುತವಾಗುತ್ತಿತ್ತು. ಬೇರೆ ರಾಜ್ಯದಿಂದ ಯಾರು ಕೊಡುತ್ತಾರೆ, ಯಾರು ತರುತ್ತಾರೆ ಅದು ತನಿಖೆಯಾಗಬೇಕು ಎಂದು ಆರ್. ಅಶೋಕ್ ತಿಳಿಸಿದರು.

minister r ashok talk
ಕಂದಾಯ ಸಚಿವ ಆರ್. ಅಶೋಕ್

By

Published : Jan 24, 2021, 3:14 PM IST

Updated : Jan 24, 2021, 3:31 PM IST

ಚಿಕ್ಕಮಗಳೂರು: ಶಿವಮೊಗ್ಗ ಹುಣಸೋಡು ಸ್ಫೋಟ ಪ್ರಕರಣ ಕುರಿತು ವಿಧಿ ವಿಜ್ಞಾನ ತಜ್ಞರ ವರದಿಗಾಗಿ ಕಾಯಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ್

ಓದಿ: ಹುಣಸೋಡು ಸ್ಪೋಟ ಪ್ರಕರಣ.. ನೈಜ ಕಾಳಜಿ ಮಾಯ.. ರಾಜಕೀಯ ನಾಯಕರಿಂದ ಕೆಸರೆರಚಾಟ..

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮೈನಿಂಗ್ ಪ್ರದೇಶಕ್ಕೆ ತರಲಾಗಿದ್ದ ಜಿಲೆಟಿನ್ ಕಡ್ಡಿಗಳು ಬೇರೆ ಉದ್ದೇಶಕ್ಕಾಗಿ ಬಳಕೆಯಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಇವನ್ನು ಬೇರೆ ರಾಜ್ಯದಿಂದ ಯಾರು ಕೊಡುತ್ತಾರೆ, ಯಾರು ತರುತ್ತಾರೆ ಎಂಬುದು ತನಿಖೆಯಾಗಬೇಕಿದೆ ಎಂದರು.

ಅದೇ ದಿನ ಕಂದಾಯ ಇಲಾಖೆಯಿಂದ ಡಿಸಾಸ್ಟರ್ ಟೀಂ ಕಳಿಸಿದ್ದೇವೆ. ಸ್ಫೋಟಕ ಸಾಮಗ್ರಿ ಕೊಳ್ಳಲು ನಿಯಮಾವಳಿಗಳನ್ನು ಮತ್ತಷ್ಟು ಬಿಗಿ ಮಾಡಲು ಸಿದ್ಧತೆ ಮಾಡಲಾಗಿದ್ದು, ಸ್ಫೋಟದ ಶಬ್ಧ ಸುಮಾರು 60 ಕಿ.ಮೀ.ವರೆಗೂ ಹೋಗಿದೆ. ಹಲವು ವರ್ಷಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ.

ಸ್ಫೋಟಕ ಸಾಮಗ್ರಿಗಳ ಶೇಖರಣೆಗೆ ನೋಡಿ ಅನುಮತಿ ಕೊಡಬೇಕು. ಈಗಿನ ಮಾಹಿತಿ ಪ್ರಕಾರ ಸ್ಫೋಟಕ ಬಂದಿರುವುದು ಆಂಧ್ರದಿಂದ ಎಂಬ ಮಾಹಿತಿ ಇದೆ. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಖಾತೆಯ ಕ್ಯಾತೆ ಮುಗಿದ ಅಧ್ಯಾಯ:

ನೂತನ ಸಚಿವರ ಖಾತೆಯ ಕುರಿತು ಮಾತನಾಡಿ, ಖಾತೆಯ ಕ್ಯಾತೆ ಮುಗಿದ ಅಧ್ಯಾಯ. ನೋ ಖಾತೆಯ ಕ್ಯಾತೆ, ಎಲ್ಲವೂ ನಿನ್ನೆಯೇ ಮುಗಿದ ಅಧ್ಯಾಯ, ಎಲ್ಲರೂ ಸಿಎಂ ಜೊತೆಯೇ ಇದ್ದಾರೆ. ಗೋಪಾಲಯ್ಯ, ಎಂಟಿಬಿ, ಸುಧಾಕರ್, ಶಂಕರ್ ಜೊತೆ ಮೊನ್ನೆಯೇ ಮಾತನಾಡಿದ್ದೇನೆ. ಎಲ್ಲರೂ ಸಮಾಧಾನವಾಗಿ, ಶಾಂತವಾಗಿ ಇದ್ದಾರೆ, ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

Last Updated : Jan 24, 2021, 3:31 PM IST

ABOUT THE AUTHOR

...view details