ಕರ್ನಾಟಕ

karnataka

ETV Bharat / state

ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರುವ ನಾಟಕ ಕಂಪನಿ: ಸಚಿವ ಅಶೋಕ್

ಕಾಂಗ್ರೆಸ್ ನಾಯಕರು ಖಾಲಿ ಬುಟ್ಟಿ ಇಟ್ಕೊಂಡು ಆಟ ಆಡಿಸ್ತಿದ್ದಾರೆ. ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರೋ ನಾಟಕದ ಕಂಪನಿ. ಈ ಕಂಪನಿಗೆ ಅವರೇ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.

Minister R. Ashok reaction on Bit coin issue in karnataka
ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರುವ ನಾಟಕದ ಕಂಪನಿ: ಸಚಿವ ಅಶೋಕ್

By

Published : Nov 19, 2021, 4:08 AM IST

ಚಿಕ್ಕಮಗಳೂರು: ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರೋ ನಾಟಕದ ಕಂಪನಿ. ಈ ಕಂಪನಿಗೆ ಅವರೇ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್. ಜನ ನೋಡಲಿ ಎಂದು ಹೇಳುತ್ತಿದ್ದಾರೆ. ಆದ್ರೆ, ಜನ ಯಾರು ಬರ್ತಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವ್ಯಂಗ್ಯವಾಗಿ ಹೇಳಿದ್ದಾರೆ.

ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರುವ ನಾಟಕದ ಕಂಪನಿ: ಸಚಿವ ಅಶೋಕ್

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಪ್ರಾರಂಭ ಮಾಡಿದ್ದು ಅವರೇ, ಅಂತ್ಯ ಹಾಡಬೇಕಿರೋದು ಅವರೇ, ಹೆಸರನ್ನೂ ಅವರೇ ಹೇಳಬೇಕು. ನಿಮಗೆ ಹೆಸರು ಹೇಳಲು ಆಗಲ್ಲ ಅಂದ್ರೆ ನೀವು ಯಾವ ಸೀಮೆ ವಿರೋಧ ಪಕ್ಷದ ನಾಯಕರು. ಇದೆಲ್ಲಾ ಕಾಂಗ್ರೆಸ್ಸಿಗರ ನಾಟಕ, ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತ ನಾಟಕ ಮಾಡ್ತಿದ್ದಾರೆ ಎಂದು ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರು ಯಾವುದೇ ಹಳ್ಳಿಗೆ ಹೋಗಿ ಹಾವು ಬಿಡಲಿ, ಹಾವು ಹಿಡಿಯಲು ನಮ್ಮ ಬಳಿ ಜನ ಇದ್ದಾರೆ. ಹಾವು ಬಿಟ್ಟ ಮೇಲೆ ಕರಿದೋ, ಬಿಳಿದೋ, ನಾಗರಹಾವೋ, ಹೆಬ್ಬಾವೋ ಹೇಳ್ತೀನಿ. ಹಾವು ಬಿಡದೆ ನಾವು ಯಾವ ಹಾವೆಂದು ಹೇಗೆ ಪರೀಕ್ಷೆ ಮಾಡೋದು. ಇದು ಕಾಂಗ್ರೆಸ್ಸಿಗರ ಸುಳ್ಳಿನ ಕಂತೆ, ಮುಂದಿನ ಚುನಾವಣೆಗೆ ತೊಂದರೆಯಾಗುತ್ತೆಂದು ಕಾಂಗ್ರೆಸ್ಸಿಗರ ಕಳ್ಳ ನಾಟಕ. ಅವರ ಬಳಿ ಹಾವು ಇದ್ದಿದ್ರೆ ಯಾವಾಗ್ಲೋ ಬಿಡೋರು, ಖಾಲಿ ಬುಟ್ಟಿ ಇಟ್ಕೊಂಡು ಆಟ ಆಡಿಸ್ತಿದ್ದಾರೆ ಎಂದರು.

ABOUT THE AUTHOR

...view details