ಚಿಕ್ಕಮಗಳೂರು :ಕನಸು ಕಾಣುವ ಹಕ್ಕು ಎಲ್ಲರಿಗೂ ಇದೆ. ಯಾವುದೇ ಕನಸು ಕಾಣುವುದು ಅಥವಾ ಕನಸು ಕಂಡರೆ ಅದು ತಪ್ಪಲ್ಲ. ಆದ್ರೆ, ಕಾಂಗ್ರೆಸ್ನವರ ಕನಸು ನನಸಾಗಲ್ಲ. ಬಿಜೆಪಿ ಸರ್ಕಾರ ಸುಭದ್ರ ಹಾಗೂ ಸ್ಥಿರವಾಗಿರುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
6 ತಿಂಗಲ್ಲಿ ಸರ್ಕಾರ ಬೀಳುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿ, ಶಕ್ತಿ, ಪಾರ್ಟಿ, ಸಂಸ್ಥೆ ಯಾವುದೂ ಮುಖ್ಯವಲ್ಲ. ದೇಶದ ಸಂವಿಧಾನ, ರಾಷ್ಟ್ರ ದ್ವಜಕ್ಕೆ ಅಗೌರವ ಸಹಿಸಲ್ಲ. ರಾಷ್ಟ್ರಧ್ವಜ ಹೊತ್ತ ರಥ ತಡೆಯೋದನ್ನು ಸಹಿಸಲ್ಲ. ನಮ್ಮ ಸರ್ಕಾರ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದರು.