ಚಿಕ್ಕಮಗಳೂರು: ಸರ್ಕಾರಕ್ಕೆ ಬಹಳಷ್ಟು ಕಠಿಣ ಸವಾಲುಗಳಿವೆ ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ. ಕೋವಿಡ್ ನಡುವೆ ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಎರಡೂ ಬಾರಿ ಅತಿವೃಷ್ಟಿ ಎದುರಾಗಿ ಸಾವಿರಾರೂ ಕೋಟಿ ನಷ್ಟ ಅನುಭವಿಸಿದ್ದೇವೆ.
ಕಳೆದ ಎಂಟು ತಿಂಗಳಿನಿಂದ 6 ಕೋಟಿ ಜನರಿಗೆ ಕೋವಿಡ್ ನಿರ್ವಹಣೆ ಒಂದು ಕಡೆಯಾದರೆ, ವೇತನ ಕಡಿತ ಮಾಡದೆ ಎಲ್ಲಾ ಸಿಬ್ಬಂದಿಗೂ ಸಂಬಳ ನೀಡಿದ್ದೇವೆ. ಸರ್ಕಾರಕ್ಕೂ ಕೂಡ ಆರ್ಥಿಕವಾಗಿ ಇತಿಮಿತಿ ಇದೆ. ಸರ್ಕಾರ ಎಂದ ಕೂಡಲೇ ಅಕ್ಷಯ ಪಾತ್ರೆಯಲ್ಲ. ಆರ್ಥಿಕ ಚಟುವಟಿಕೆಗಳು ಕಡಿಮೆ ಆಗಿರೋದರಿಂದ ಎಲ್ಲಾ ರೀತಿಯಿಂದ ಹಣ ಕ್ರೋಢೀಕರಿಸಲು ಕಷ್ಟ ಸಾಧ್ಯವಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಇಂತಹ ಸಂದರ್ಭದಲ್ಲಿ ಯಾವುದೇ ಸರ್ಕಾರ ಬೆಲೆ ಏರಿಕೆಯನ್ನು ಸಂತೋಷದಿಂದ ಮಾಡುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಿಂದ ಮಾಡುವಂತಹ ಕೆಲಸವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಇದರ ಬಗ್ಗೆ ಚಿಂತನೆ ಮಾಡಿದ್ದಾರೆ. ವಿರೋಧ ಪಕ್ಷಗಳು ಹೇಳಿರೋದಕ್ಕೆ ಮುಖ್ಯಮಂತ್ರಿಗಳು ಈ ಕುರಿತು ಮತ್ತೊಮ್ಮೆ ವಿಚಾರ ಮಾಡುತ್ತಾರೆ. ಕಳೆದ ಎಂಟು ತಿಂಗಳಿನಿಂದ ಸಾರಿಗೆ ವ್ಯವಸ್ಥೆ ನಿರ್ವಹಣೆ ಮಾಡುತ್ತಿದ್ದೇವೆ. ಸರ್ಕಾರ ತುಂಬಾ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ಹಿನ್ನೆಲೆ ವಿದ್ಯುತ್ ದರ ಹೆಚ್ಚಳ ಮಾಡುತ್ತಿದ್ದಾರೆ ಎಂದರು.
ನಂತರ ಪಟಾಕಿ ನಿಷೇಧ ಕುರಿತು ಮಾತನಾಡಿ, ಜನರ ಆರೋಗ್ಯ ಮುಖ್ಯವಾಗಿರುವ ಹಿನ್ನೆಲೆ ಮುಖ್ಯಮಂತ್ರಿಗಳು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹಿಂದೆ ವರ್ತಕರಿಗೆ ಗೊತ್ತಿರಲಿಲ್ಲವಾ. ಪಟಾಕಿ ಹೊಗೆ ಮಾರಕ ಎಂದು ಅವರಿಗೆ ಗೊತ್ತಿರಲಿಲ್ಲವಾ? ಕೆಲವರ ಲಾಭಕ್ಕಾಗಿ ಕೋಟ್ಯಂತರ ಜನರ ಆರೋಗ್ಯ ನಿರ್ಲಕ್ಷ್ಯ ಮಾಡೋದಕ್ಕೆ ಸಾಧ್ಯವಿಲ್ಲ. ಪರಿಸರ ಸ್ನೇಹಿ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ ಎಂದರು.