ಕರ್ನಾಟಕ

karnataka

ETV Bharat / state

ಮೋದಿಯಂತಹ ಒಳ್ಳೆಯ ಸೇಬು ಬಿಟ್ಟು, ಕೊಳೆತ ಮಾವಿನಂತಿರುವ ಕಾಂಗ್ರೆಸ್​ಗೆ ಯಾರಾದ್ರೂ ಹೋಗ್ತಾರಾ? ಸಚಿವ ಈಶ್ವರಪ್ಪ - ಸಿದ್ದರಾಮಯ್ಯ ಹೇಳಿಕೆಗೆ ಕೆ. ಎಸ್ ಈಶ್ವರಪ್ಪ ಚಿಕ್ಕಮಗಳೂರಿನಲ್ಲಿ ಟಾಂಗ್

ನರೇಂದ್ರ ಮೋದಿಯಂಥ ನಾಯಕ ಕಾಂಗ್ರೆಸ್​ನಲ್ಲಿ, ಜೆಡಿಎಸ್​ನಲ್ಲಿ ಸಿಕ್ತಾರಾ.? ನಮ್ಮ ಹತ್ರ ಬೈಸಿಕೊಳ್ಳೋಕೆ ಈ ರೀತಿ ಮಾತುಗಳನ್ನು ಸಿದ್ದರಾಮಯ್ಯ ಆಡ್ತಾರೆ ಎಂದು ಸಚಿವ ಕೆ. ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

minister-k-s-eshwarappa
ಸಚಿವ ಕೆ. ಎಸ್ ಈಶ್ವರಪ್ಪ

By

Published : Jan 26, 2022, 9:01 PM IST

ಚಿಕ್ಕಮಗಳೂರು: ಬಿಜೆಪಿ ಶಾಸಕರು, ಸಚಿವರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕೊಳೆತುಹೋಗಿರುವ ಮಾವಿನ ಹಣ್ಣನ್ನ ಯಾರಾದ್ರೂ ಖರೀದಿ ಮಾಡ್ತಾರಾ?. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಳೆತು ನಾರುತ್ತಿದೆ. ಬಿಜೆಪಿಯಲ್ಲಿ ಮೋದಿ ಒಳ್ಳೆಯ ಸೇಬಿನಂತೆ. ಒಳ್ಳೆಯ ಸೇಬನ್ನ ಬಿಟ್ಟು ಕೊಳೆತು ಮಾವಿನ ಹಣ್ಣಿನ ಹತ್ತಿರ ಹೋಗ್ತಾರಾ.? ಕಾಂಗ್ರೆಸ್ ಪಕ್ಷಕ್ಕೆ ಡಿಮ್ಯಾಂಡ್ ಕ್ರಿಯೇಟ್ ಮಾಡೋಕೆ ಈ ಆಟ ಆಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು, ಸರ್ಕಾರ ಕಳೆದುಕೊಂಡರು. ಈಗಲೂ ಮಾನ ಮರ್ಯಾದೆ ಇಲ್ಲದ ಹಾಗೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಕೆ. ಎಸ್ ಈಶ್ವರಪ್ಪ ಮಾತನಾಡಿದರು

ನರೇಂದ್ರ ಮೋದಿಯಂಥ ನಾಯಕ ಕಾಂಗ್ರೆಸ್​ನಲ್ಲಿ, ಜೆಡಿಎಸ್​ನಲ್ಲಿ ಸಿಕ್ತಾರಾ.? ನಮ್ಮ ಹತ್ರ ಬೈಸಿಕೊಳ್ಳೋಕೆ ಈ ರೀತಿ ಮಾತುಗಳನ್ನು ಸಿದ್ದರಾಮಯ್ಯ ಆಡ್ತಾರೆ. ನಾನು ಬದುಕಿದ್ದೇನೆ. ಜೀವಂತವಿದ್ದೀನಿ ಎಂದು ತೋರಿಸಿಕೊಳ್ಳೋಕೆ ಈ ರೀತಿ ಮಾತಾಡ್ತಾರೆ. ಎಷ್ಟು ಜನ ಇದ್ದಾರೆ ಅನ್ನೋದನ್ನ ಹೇಳಲ್ಲ. ಹೆಸರನ್ನು ಹೇಳಲ್ಲ. ಇಟ್ಕೋ ನಿನ್ನ ಹತ್ರನೇ, ನಮಗೇನಂತೆ ಎಂದು ಏಕವಚನದಲ್ಲೇ ಈಶ್ವರಪ್ಪ ಹರಿಹಾಯ್ದರು.

ನಾನು ಡಿ. ಕೆ ಶಿವಕುಮಾರ್ ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ಒಬ್ಬ ಬಿಜೆಪಿ ಸಿಂಹದಮರಿ ಎಂಎಲ್ಎ ಅವರು ಕಾಂಗ್ರೆಸ್​ಗೆ ಬರ್ತಾರೆ ಅಂತಾ ಹೆಸರು ಹೇಳಲಿ. ಇಬ್ಬರು ಬರೀ ಪುಕ್ಸಟ್ಟೆ ಮಾತುಗಳನ್ನು ಆಡ್ತಾರೆ ಎಂದು ಹೇಳಿದರು.

ಸಚಿವ ಕೆ. ಎಸ್ ಈಶ್ವರಪ್ಪ ಮಾತನಾಡಿದರು

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಾಂಗ್ರೆಸ್ ಪಕ್ಷ ಮಹಾದಾಯಿ ವಿಚಾರದಲ್ಲಿ ಪಾದಯಾತ್ರೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್​ ಅನ್ನು ಒಂದು ರಾಜಕೀಯ ಪಕ್ಷ ಅಂತಾ ಕರೆಯಬೇಕಾ.? ಕಾಂಗ್ರೆಸ್ ಹುಳ ತಿಂದು ಹೋಗಿರುವ ಮರ. ಗೆದ್ದಲು ತಿಂದಿದೆ. ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷವನ್ನು ಸಾಯಿಸುತ್ತಾರೆ. ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಮಹಾ ಪುರುಷರೆಲ್ಲ ಹೋಗಿದ್ದಾರೆ. ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಸ್ವಾರ್ಥಿಗಳು. ಇವರ ಸ್ವಾರ್ಥಕ್ಕೆ ಏನು ಬೇಕಾದರೂ ಹೇಳಿಕೆ ಕೊಡ್ತಾರೆ. ಪಾದಯಾತ್ರೆ ಮಾಡುತ್ತಾರೆ ಎಂದರು.

ಇವತ್ತು ನೀನು ಪ್ರತಿಪಕ್ಷದ ನಾಯಕ ಅಲ್ಲವೆಂದು ಸಿದ್ದರಾಮಯ್ಯಗೆ ಹೇಳಿದ್ರೆ, ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಖಂಡಿತವಾಗಿಯೂ ಇರಲ್ಲ. ಜೆಡಿಎಸ್​ನಲ್ಲಿ ಅವಕಾಶ ಸಿಕ್ಕಿಲ್ಲವೆಂದು ಪಕ್ಷ ಬಿಟ್ಟರು. ಪ್ರತಿಪಕ್ಷದ ನಾಯಕನ ಸ್ಥಾನ ಸಿಗುತ್ತೆ ಅಂತ ಕಾಂಗ್ರೆಸ್​ಗೆ ಬಂದರು. ಅಂದಿನಿಂದಲೂ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸ್ಥಾನವನ್ನು ಅಲಂಕರಿಸುತ್ತಾ ಬಂದಿದ್ದಾರೆ.

ಹಾಗಾದ್ರೆ, ಕಾಂಗ್ರೆಸ್​ನಲ್ಲಿ ಬೇರೆ ಯಾರು ನಾಯಕರು ಇಲ್ವಾ.? ಸೋನಿಯಾ ಗಾಂಧಿ ಕರೆದರೂ ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಹೋಗಲಿಲ್ಲ. ರಾಜ್ಯದಲ್ಲಿ ಪುಕ್ಸಟ್ಟೆ ಸ್ಥಾನ ಸಿಗುತ್ತೆ ಅಂತ ಇಲ್ಲೇ ಇದ್ದಾರೆ. ಇಂಥವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಅವರ ಚಟ ತೀರಿಸೋಕೆ ಮಾತನಾಡಲಿ ಬಿಡಿ ಎಂದು ಪ್ರತಿಕ್ರಿಯಿಸಿದರು.

ಓದಿ:ಚಿಕ್ಕಮಗಳೂರು : ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲೇ ವಿವಿಧ ಪಕ್ಷದ ಮುಖಂಡರ ಕಿತ್ತಾಟ

For All Latest Updates

TAGGED:

ABOUT THE AUTHOR

...view details