ಕರ್ನಾಟಕ

karnataka

ETV Bharat / state

ಬಿಎಸ್​ವೈ ರೈತ, ಅವರಿಗೆ ದುಡಿಯುವ ಎತ್ತು ಯಾವುದೆಂದು ಗೊತ್ತು: ಸಿ.ಟಿ.ರವಿ - ಖಾತೆ ಹಂಚಿಕೆ ವಿಚಾರ ಕುರಿತಂತೆ ಸಿ.ಟಿ ರವಿ ಪ್ರತಿಕ್ರಿಯೆ ಸುದ್ದಿ

ಖಾತೆ ಹಂಚಿಕೆ ವಿಚಾರ ಕುರಿತಂತೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದರು.

ಖಾತೆ ಹಂಚಿಕೆ ವಿಚಾರ ಕುರಿತಂತೆ ಸಿ.ಟಿ ರವಿ ಪ್ರತಿಕ್ರಿಯೆ Minister CTRavi statement in Chikkamagaluru
ಸಚಿವ ಸಿ.ಟಿ ರವಿ ಹೇಳಿಕೆ

By

Published : Feb 8, 2020, 5:19 PM IST

ಚಿಕ್ಕಮಗಳೂರು: ಖಾತೆ ಹಂಚಿಕೆ ವಿಚಾರ ಕುರಿತಂತೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದರು.

ಸಚಿವ ಸಿ.ಟಿ.ರವಿ ಹೇಳಿಕೆ

ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಅವರು ಓರ್ವ ಅನುಭವಿ ಹಾಗೂ ರೈತರಾಗಿದ್ದಾರೆ. ರೈತನಿಗೆ ದುಡಿಯುವ ಎತ್ತು ಯಾವುದು, ಕಳ್ಳ ಎತ್ತು ಯಾವುದು ಅಂತಾ ಗೊತ್ತಿದೆ. ದುಡಿಯುವ ಎತ್ತಿಗೆ ಚೆನ್ನಾಗಿ ಕೆಲಸ ಕೊಡುತ್ತಾರೆ. ಚೆನ್ನಾಗಿ ಮೇವು ಹಾಕಿದರೆ ಹೆಚ್ಚು ಕಾಲ ದುಡಿಯುತ್ತದೆ. ಕಳ್ಳ ಎತ್ತಿಗೆ ಏನು ಕೊಟ್ಟರೂ, ಹೆಗಲ ಮೇಲೆ ನೊಗ ಹಾಕಿದರೆ ಸೈಡ್​ಗೆ ಎಳೆದುಕೊಂಡು ಹೋಗಿ‌ ನಿಲ್ಲುತ್ತದೆ. ಯಡ್ಡಿಯೂರಪ್ಪ ಅವರು ದುಡಿಯುವ ಎತ್ತಿಗೆ ಹೆಚ್ಚು ಕೆಲಸ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.

ಕಣ್ಣುಕಟ್ಟು ಅಂತಾ ಯಾವುದು ಇಲ್ಲ, ಅದರ ಪ್ರಶ್ನೆಯೇ ಇಲ್ಲ. ನೂತನ ಸಚಿವರೊಂದಿಗೆ ಸಮಾಲೋಚನೆ ಮಾಡಿ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ನನಗೆ ಯಾವ ಖಾತೆ ಕೊಟ್ಟರೂ ನಾನು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

For All Latest Updates

TAGGED:

ABOUT THE AUTHOR

...view details