ಚಿಕ್ಕಮಗಳೂರು: ಅವರು ಎಲ್ಲಿಗಾದರೂ ಬರಲಿ. ನಾನು ಬೇಕಾದರೂ ಅಲ್ಲಿಗೇ ಹೋಗುತ್ತೇನೆ. ಅಭಿವೃದ್ದಿ ಕುರಿತಾಗಿ ನಾನು ಚರ್ಚೆಗೆ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ತಾವು ಕಳೆದ್ಹೋಗದಿರಲೆಂದು ಇಂತಹ ಹೇಳಿಕೆ ನೀಡ್ತಾರೆ.. ಸಚಿವ ಸಿ ಟಿ ರವಿ
ಜನರ ಮಧ್ಯೆ ಇರಲು ತುಂಬಾ ಪಾಸಿಟಿವ್ ಸಂಗತಿಗಳಿವೆ. ಆ ಪಾಸಿಟಿವ್ ವಿಚಾರಗಳಿಂದ ಜನರ ಮಧ್ಯೆ ಇರಬಹುದು. ಆದರೆ, ಸಂಘ ಪರಿವಾರದ ಮೇಲೆ ಆರೋಪ ಮಾಡೋದು ಫ್ಯಾಷನ್ ಆಗಿದೆ ಅಂತಾ ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಸಚಿವ ಸಿ ಟಿ ರವಿ ಕಿಡಿಕಾರಿದರು.
ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜ್ ಕೊಡ್ಲಿಲ್ಲ. ಮೊಣಕೈಗೂ ತುಪ್ಪ ಸವರಲಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸವಾಗುತ್ತಿಲ್ಲ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಸಿ ಟಿ ರವಿ, ನಮ್ಮ 5 ತಿಂಗಳ ಅಂಕಿ ಅಂಶ ಅವರಿಗೆ ನೀಡುತ್ತೇನೆ. ಮೈಸೂರು ಅಥವಾ ಚಿಕ್ಕಮಗಳೂರು ಜಿಲ್ಲೆಗಳ ಯಾವ ಚರ್ಚೆಗಾದರೂ ಸಿದ್ಧ ಎಂದರು. ಯೋಜನೆಗೆ ಮಂಜೂರಾತಿ, ಯಾವ ಹಂತದಲ್ಲಿದೆ ಎಲ್ಲಾ ಮಾಹಿತಿ ಅವರಿಗೆ ಕೊಡುತ್ತೇನೆ ಅವರ ಹೇಳಿಕೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತ ಎಂದರು.
ಮಾಜಿ ಸಿಎಂ ಹೆಚ್‌ಡಿಕೆ ಕಳೆದು ಹೋಗಬಾರದೆಂದು ಈ ರೀತಿ ಜೀವ ಭಯವಿದೆ ಅಂತಾ ಹೇಳಿ ಸಕ್ರಿಯವಾಗಿರಬೇಕಿಲ್ಲ. ಜನರ ಮಧ್ಯೆ ಇರೋದಕ್ಕೆ ತುಂಬಾ ಪಾಸಿಟಿವ್ ಸಂಗತಿಗಳಿವೆ. ಆ ಪಾಸಿಟಿವ್ ವಿಚಾರಗಳಿಂದ ಜನರ ಮಧ್ಯೆ ಇರಬಹುದು. ಈ ರೀತಿ ಸುದ್ದಿಯಲ್ಲಿ ಇರಬೇಕೆಂಬುದು ಅವರ ಬಯಕೆಯಾಗಿದೆ. ಸಂಘ ಪರಿವಾರದ ಮೇಲೆ ಆರೋಪ ಮಾಡೋದು ಫ್ಯಾಷನ್ ಆಗಿದೆ ಎಂದರು. ಯಾರ ಮೂಲಕ ಬೆದರಿಕೆ ಎಂದು ನಿರ್ದಿಷ್ಟವಾಗಿ ಅವರು ಹೇಳಲಿ. ಈ ಹಿಂದೆ ಆಡಳಿತ ವ್ಯವಸ್ಥೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಆಗಿದ್ದವರು. ಓರ್ವ ಜನ ಸಾಮಾನ್ಯನ ರಕ್ಷಣೆ ಕೂಡ ಸರ್ಕಾರದ ಹೊಣೆ ಎಂದರು.