ಚಿಕ್ಕಮಗಳೂರು: ಕೊರೊನಾ ಭೀತಿ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ರಾಮನಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಲಾಕ್‌ಡೌನ್ ಟೈಂಪಾಸ್: ಮಕ್ಕಳೊಂದಿಗೆ ವಾಲಿಬಾಲ್ ಆಡಿದ ಸಚಿವ ಸಿ.ಟಿ.ರವಿ - ಮಕ್ಕಳ್ಳೊಂದಿಗೆ ವಾಲಿಬಾಲ್ ಆಡುತ್ತಿರುವ ಸಚಿವ ಸಿ. ಟಿ. ರವಿ
ಸದಾ ರಾಜಕಾರಣದಲ್ಲಿ ಬ್ಯುಸಿ ಇರುತ್ತಿದ್ದ ಸಚಿವ ಸಿ.ಟಿ.ರವಿ ಇಂದು ತಮ್ಮ ಮಕ್ಕಳೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ವಾಲಿಬಾಲ್ ಆಡಿ, ತಮ್ಮ ಕುಟುಂಬದ ಸದಸ್ಯರೊಂದಿಗೂ ಖುಷಿಯಾಗಿ ಕಾಲ ಕಳೆದರು.
ಮಕ್ಕಳ್ಳೊಂದಿಗೆ ವಾಲಿಬಾಲ್ ಆಡುತ್ತಿರುವ ಸಚಿವ ಸಿ. ಟಿ. ರವಿ
ಬೆಳಗ್ಗೆ ನಗರ ಸಂಚಾರ ಮಾಡಿ ಲಾಕ್ ಡೌನ್ ಪರಿಶೀಲನೆ ಮಾಡಿರುವ ಸಚಿವರು ಇನ್ನೊಂದು ಕಡೆ ತಮ್ಮ ಕುಟುಂಬ ಸದಸ್ಯರಿಗೂ ಸಮಯ ಮೀಸಲಿಡುತ್ತಿದ್ದಾರೆ. ಇಂದು ತಮ್ಮ ಮಕ್ಕಳೊಂದಿಗೆ ಗಂಟೆಗೂ ಅಧಿಕ ಕಾಲ ವಾಲಿಬಾಲ್ ಆಡಿ ನಿರಾಳರಾದ್ರು.