ಕರ್ನಾಟಕ

karnataka

ETV Bharat / state

ರಾಜಿ ಮಾಡಿಕೊಂಡು ಅಧಿಕಾರ ನಡೆಸುವ ಪಕ್ಷ ನಮ್ಮದಲ್ಲ: ಸಚಿವ ಸಿ.ಟಿ.ರವಿ - ಬಾಳೆಹೊನ್ನೂರಿಗೆ ಸಚಿವ ಸಿ.ಟಿ.ರವಿ ಭೇಟಿ

ಇಲ್ಲಿ ಯಾರು ಕೆಲಸ ಇಲ್ಲದೆ ಖಾಲಿ ಇಲ್ಲ. ಅವರ ಪಕ್ಷದ ಶಾಸಕರ ಮನೆಯೇ ಧ್ವಂಸವಾಗಿದೆ. ನನಗೆ ಡಿ.ಕೆ.ಶಿವಕುಮಾರ್ ಅವರ ರಾಜಕಾರಣದ ದಾರಿ ಬಗ್ಗೆ ಅನುಮಾನವಿದೆ. ತನ್ನ ಪಕ್ಷದ ಶಾಸಕರಿಗಿಂತ ಸಮಾಜಘಾತುಕರು ಇವರಿಗೆ ದೊಡ್ಡವರಾದರಾ ಎಂದು ಪ್ರಶ್ನಿಸಿದರು. ವಿ

By

Published : Aug 17, 2020, 3:54 PM IST

ಚಿಕ್ಕಮಗಳೂರು: ರಾಜಿ ಮಾಡಿಕೊಂಡು ಅಧಿಕಾರ ನಡೆಸುವ ಪಕ್ಷ ನಮ್ಮದಲ್ಲ. ಸಮಾಜಘಾತುಕ ಶಕ್ತಿಗಳ ಜೊತೆ ರಾಜಿ ಇಲ್ಲವೇ ಇಲ್ಲ. ನಮ್ಮ ಪಕ್ಷ ಅವರಿಂದ ಲಾಭದ ರಾಜಕಾರಣ ಎಂದಿಗೂ ಮಾಡುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಸಚಿವ ಸಿ.ಟಿ.ರವಿ ಹೇಳಿಕೆ

ಬೆಂಗಳೂರಿನ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಮುನ್ನೂರಕ್ಕೂ ಅಧಿಕ ಜನರನ್ನು ಬಂಧನ ಮಾಡಲಾಗಿದೆ. ರಾಜಿ ಮಾಡಿಕೊಂಡು ಅಧಿಕಾರ ನಡೆಸುವ ಪಕ್ಷ ನಮ್ಮದಲ್ಲ. ಸಮಾಜಘಾತುಕ ಶಕ್ತಿಗಳ ಜೊತೆ ರಾಜಿ ಇಲ್ಲವೇ ಇಲ್ಲ. ನಮ್ಮ ಪಕ್ಷ ಅವರಿಂದ ಲಾಭದ ರಾಜಕಾರಣ ಎಂದಿಗೂ ಮಾಡುವುದಿಲ್ಲ ಎಂದರು.

ಗಲಭೆ ಸಂಬಂಧ ನಾವು ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ಆರೋಪಿಸುವುದನ್ನು ನೋಡಿದರೆ ಅವರನ್ನು ಬೆಂಬಲಿಸುವಂತೆ ಕಾಣಿಸುತ್ತಿದೆ. ಇಲ್ಲಿ ಯಾರು ಕೆಲಸ ಇಲ್ಲದೆ ಖಾಲಿ ಇಲ್ಲ. ಅವರ ಪಕ್ಷದ ಶಾಸಕರ ಮನೆಯೇ ಧ್ವಂಸವಾಗಿದೆ. ನನಗೆ ಡಿ.ಕೆ.ಶಿವಕುಮಾರ್ ಅವರ ರಾಜಕಾರಣದ ದಾರಿ ಬಗ್ಗೆ ಅನುಮಾನವಿದೆ. ತನ್ನ ಪಕ್ಷದ ಶಾಸಕರಿಗಿಂತ ಸಮಾಜಘಾತುಕರು ಇವರಿಗೆ ದೊಡ್ಡವರಾದರಾ ಎಂದು ಪ್ರಶ್ನಿಸಿದರು.

ಸಂಪನ್ನರಿಗೆ ಭಯ ಬೇಡ, ಕಳ್ಳರಿಗೆ ಬಲೆ ಹಾಕುತ್ತೇವೆ ಎಂದು ಸಚಿವ ಸಿ.ಟಿ.ರವಿ ಕಿಡಿಕಾರಿದರು.

ABOUT THE AUTHOR

...view details