ಚಿಕ್ಕಮಗಳೂರು:ನಗರದ ಕುವೆಂಪು ಕಲಾಮಂದಿರದಲ್ಲಿ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಫರ್ ಜೋನ್ ಘೋಷಣೆ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡು ಅಧಿಸೂಚನೆ ಹೊರಡಿಸುವ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.
ಸಂರಕ್ಷಣಾ ಮೀಸಲು ಪ್ರದೇಶಗಳ ಕುರಿತು ಸಾರ್ವಜನಿಕರೊಂದಿಗೆ ಸಿ.ಟಿ.ರವಿ ಸಭೆ - Minister CT Ravi
ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಘೋಷಣೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಫರ್ ಝೋನ್ ಘೋಷಣೆ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡು ಅಧಿಸೂಚನೆ ಹೊರಡಿಸುವ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.
![ಸಂರಕ್ಷಣಾ ಮೀಸಲು ಪ್ರದೇಶಗಳ ಕುರಿತು ಸಾರ್ವಜನಿಕರೊಂದಿಗೆ ಸಿ.ಟಿ.ರವಿ ಸಭೆ Minister CT Ravi had a meeting with the public](https://etvbharatimages.akamaized.net/etvbharat/prod-images/768-512-8594176-1038-8594176-1598630766947.jpg)
ಸಭೆ ಬಳಿಕ ಮಾತನಾಡಿದ ಸಚಿವ ಸಿ.ಟಿ.ರವಿ, 1996ರಲ್ಲಿ ಈ ಬಗ್ಗೆ ಪ್ರಸ್ತಾವನೆಯಾಗಿತ್ತು. ನ್ಯಾಯಾಲಯದ ನಿರ್ದೇಶನದಂತೆ 2019 ಜನವರಿ 9ರಂದು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ವೈಲ್ಡ್ ಲೈಫ್ ಬೋರ್ಡ್ ಇದನ್ನು ಸಂರಕ್ಷಿತ ಪ್ರದೇಶ ಎಂದು ಅಧಿಸೂಚನೆ ಹೊರಡಿಸಲು ನಿರ್ಣಯ ತೆಗೆದುಕೊಂಡಿದೆ. ಆದರೆ, ಇಲ್ಲಿನ ಕೆಲವು ಪ್ರದೇಶಗಳನ್ನು ವಿಸ್ತೃತವಾಗಿ ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ, ಇಂದು ಸಾರ್ವಜನಿಕರ ಸಭೆ ಆಯೋಜನೆ ಮಾಡಲಾಗಿತ್ತು. ಜನರ ಬದುಕಿಗೂ ತೊಂದರೆಯಾಗಬಾರದು, ಅರಣ್ಯವೂ ಉಳಿಯಬೇಕು. ಮುಳ್ಳಯ್ಯನಗಿರಿ ಪಾತ್ರದಲ್ಲಿ ಜಲ ಮೂಲಗಳಿವೆ. ಅಯ್ಯನಕೆರೆ, ಮದಗದಕೆರೆ, ರಾಮೇಶ್ವರ ಕೆರೆ ಸೇರಿ ನೀರಿನ ಮೂಲಗಳಿರುವುದೇ ಮುಳ್ಳಯ್ಯನಗಿರಿ ಪ್ರದೇಶದಲ್ಲಿ. ಅದೇ ರೀತಿ ಅಲ್ಲಿನ ಜನರ ಜೀವನಕ್ಕೂ ಯಾವುದೇ ತೊಂದರೆಯಾಗಬಾರದು.
ಒಂದು ವೇಳೆ ಇದು ಅರಣ್ಯ ಪ್ರದೇಶ ಎಂದಾದರೆ ನಮ್ಮ ಬದುಕಿಗೆ ತೊಂದರೆಯಾಗುತ್ತದೆ ಎಂಬ ಭಯ ಜನರಲ್ಲಿ ಆವರಿಸಿದೆ. ಇದನ್ನು ಕೆಲವರು ರಾಜಕೀಯ ದುರ್ಬಳಕೆ ಮಾಡಿಕೊಳ್ಳುವ ಹುನ್ನಾರವನ್ನು ನಡೆಸಿದ್ದಾರೆ. ಇದನ್ನು ಸಂರಕ್ಷಿತ ಪ್ರದೇಶ ಮಾಡಬೇಕೆಂದು ಈ ಹಿಂದೆ ಹಲವರು ಪತ್ರ ನೀಡಿದ್ದು, ಕೆಲವರು ಧ್ವನಿ ಬದಲಾಯಿಸಿದ್ದಾರೆ. ಮುಳ್ಳಯ್ಯನಗಿರಿ ಕೆಲ ಪ್ರದೇಶಗಳಲ್ಲಿ ಜನರು ಸಾಗುವಳಿ ಮಾಡಿರುವ ಪ್ರದೇಶ ಉಳಿಯಬೇಕು. ಮಿಕ್ಕ ಜಾಗವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು ಎಂದರು.