ಕರ್ನಾಟಕ

karnataka

ETV Bharat / state

ದತ್ತಪೀಠದ ಪಾದುಕೆಯ ದರ್ಶನದ ವೇಳೆ ಸಚಿವ ಸಿ ಟಿ ರವಿ ನಿಯಮ ಉಲ್ಲಂಘನೆ ಆರೋಪ - minister ct ravi allegedly violates rules while visiting dattapeetha

ದತ್ತಪೀಠದ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಫೋಟೋ ತೆಗೆಯುವಂತಿಲ್ಲ. ಆದರೆ, ಸಿ ಟಿ ರವಿ ಪಾದುಕೆ ದರ್ಶನ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಅವರ ಜೊತೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಇರುವ ಫೋಟೋಗಳು ಬಹಿರಂಗವಾಗಿವೆ..

Minister C.T Ravi
ಸಚಿವ ಸಿ.ಟಿ ರವಿ

By

Published : Sep 28, 2020, 5:25 PM IST

ಚಿಕ್ಕಮಗಳೂರು :ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಇಂದು ದತ್ತಪೀಠಕ್ಕೆ ತೆರಳಿ ಪಾದುಕೆಯ ದರ್ಶನ ಪಡೆದಿದ್ದಾರೆ.

ದತ್ತಪೀಠದ ಪಾದುಕೆ ದರ್ಶನದ ವೇಳೆ ಸಚಿವ ಸಿ ಟಿ ರವಿ ನಿಯಮ ಉಲ್ಲಂಘನೆ ಆರೋಪ

ಈ ವೇಳೆ ಸಚಿವರು ನಿಯಮ ಉಲ್ಲಂಘನೆ ಮಾಡಿರುವ ಆರೋಪವೂ ಕೇಳಿ ಬಂದಿದೆ. ದತ್ತಪೀಠದ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಫೋಟೋ ತೆಗೆಯುವಂತಿಲ್ಲ. ಆದರೆ, ಸಿ ಟಿ ರವಿ ಪಾದುಕೆ ದರ್ಶನ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಅವರ ಜೊತೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಇರುವ ಫೋಟೋಗಳು ಬಹಿರಂಗವಾಗಿವೆ.

ಕಾನೂನಿನ ಬಗ್ಗೆ ಅರಿವಿದ್ದರೂ ಸಚಿವ ಸಿ ಟಿ ರವಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ರೀತಿಯ ನಿಯಮ ಉಲ್ಲಂಘನೆ ಅವರಿಂದ್ಲೇ ನಡೆದಿದೆಯೋ ಅಥವಾ ಅವರ ಜೊತೆ ಹೋಗಿದ್ದ ಕಾರ್ಯಕರ್ತರಿಂದ ನಡೆದಿದೆಯೋ ಎಂಬುದರ ಬಗ್ಗೆ ಖಚಿತತೆ ಇಲ್ಲ.

ABOUT THE AUTHOR

...view details