ಕರ್ನಾಟಕ

karnataka

ETV Bharat / state

ಕೋವಿಡ್​ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಸಿಬ್ಬಂದಿ ವಿರುದ್ಧ ಸೋಂಕಿತರ ಆಕ್ರೋಶ - mess at Covid Care Center

ಊಟ, ನೀರು ಸೇರಿದಂತೆ ಯಾವುದೇ ರೀತಿಯ ವ್ಯವಸ್ಥೆಗಳಿಲ್ಲ ಎಂದು ಚಿಕ್ಕಮಗಳೂರು ಬೇಲೂರು ರಸ್ತೆಯ ಕೋವಿಡ್​ ಕೇಂದ್ರದಲ್ಲಿರುವ ಸೋಂಕಿತರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

mess at Chikkamagaluru Covid Care Center
ಕೋವಿಡ್​ ಕೇಂದ್ರದಲ್ಲಿ ಅವ್ಯವಸ್ಥೆ

By

Published : Jul 22, 2020, 1:58 PM IST

ಚಿಕ್ಕಮಗಳೂರು:ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಬೇಲೂರು ರಸ್ತೆಯ ಕೋವಿಡ್​ ಕೇರ್​ ಸೆಂಟರ್​ನಲ್ಲಿರುವ ರೋಗಿಗಳು ಅಲ್ಲಿನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಂಜೆ ವೇಳೆಗೆ ನಮ್ಮನ್ನು ಕರೆ ತಂದು ಇಲ್ಲಿ ಕ್ವಾರಂಟೈನ್ ಮಾಡಲಾಗಿದೆ. ರಾತ್ರಿ ಸರಿಯಾಗಿ ಊಟ ನೀಡಿಲ್ಲ. ವಿಟಮಿನ್ ಸಿ ಹಾಗೂ ಜಿಂಕ್ ಮಾತ್ರೆಗಳನ್ನು ನೀಡಿದ್ದಾರೆ. ಊಟ ಮಾಡದೆ ಹೇಗೆ ಮಾತ್ರೆ ಸೇವಿಸುವುದು. ಬೆಳಗ್ಗೆ ಕಾಫಿ, ತಿಂಡಿ ಏನೂ ಕೊಟ್ಟಿಲ್ಲ. ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ. ಆರೋಗ್ಯ ತಪಾಸಣೆಯನ್ನೂ ಮಾಡುತ್ತಿಲ್ಲ. ಇಲ್ಲಿ ನಮ್ಮ ಬಗ್ಗೆ ಯಾರೂ ಕಾಳಜಿ ವಹಿಸುವವರು ಇಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ಕೋವಿಡ್​ ಕೇಂದ್ರದಲ್ಲಿ ಸೋಂಕಿತರ ಪರದಾಟ

ಅಲ್ಲದೆ, ರೋಗಿಗಳು ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದು, ಇಲ್ಲಿ ನಮ್ಮನ್ನು ನೋಡಿಕೊಳ್ಳಲು ಆಗದಿದ್ದರೆ ಜೈಲಿಗೆ ಕಳುಹಿಸಿ. ಅಲ್ಲಿ ಸರಿಯಾಗಿ ಊಟ, ತಿಂಡಿ ನೀಡ್ತಾರೆ. ಈ ತರ ನಿಷ್ಕಾಳಜಿ ವಹಿಸಿದರೆ, ಬಿಪಿ, ಶುಗರ್​ ಇರುವ ರೋಗಿಗಳ ಪರಿಸ್ಥಿತಿಯೇನು ಎಂದು ಪ್ರಶ್ನಿಸಿದ್ದಾರೆ.

ಪೊಲೀಸ್​ ಠಾಣೆ ಸೀಲ್ ಡೌನ್:ಜಿಲ್ಲೆಯ ಮೂಡಿಗೆರೆ ತಾಲೂಕು ಕಳಸ ಪೊಲೀಸ್​ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ನಾಲ್ಕು ಜನ ಸೋಂಕಿತರಲ್ಲಿ ಯಾವುದೇ ಗುಣ ಲಕ್ಷಣಗಳು ಕಾಣಿಕೊಂಡಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ರ್ಯಾಂಡಮ್​ ಟೆಸ್ಟ್​ ವೇಳೆ ಸೋಂಕು ಪತ್ತೆಯಾಗಿದೆ. ಹೀಗಾಗಿ ನಾಲ್ವರನ್ನೂ ಜಿಲ್ಲಾ ಕೋವಿಡ್​ ಆಸ್ಙತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ABOUT THE AUTHOR

...view details