ಚಿಕ್ಕಮಗಳೂರು:ಸಾಮಾಜಿಕ ಜಾಲತಾಣಗಳ ಅನುಕೂಲ, ಅನಾನುಕೂಲಗಳ ಬಗ್ಗೆ ಇತ್ತೀಚೆಗೆ ತುಂಬಾ ಚರ್ಚೆಗಳು ನಡೆಯುತ್ತಿವೆ.. ಎಷ್ಟೋ ಅಪರಾಧ ಕೃತ್ಯಕ್ಕೂ ಸಾಮಾಜಿಕ ಜಾಲತಾಣಗಳೆ ಕಾರಣ ಎಂಬ ದೂರುಗಳು ಕೇಳಿ ಬಂದಿವೆ. ಆದರೆ, ಮಾನಸಿಕ ಅಸ್ವಸ್ಥನೊಬ್ಬ 8 ವರ್ಷದ ಬಳಿಕ ತನ್ನ ಕುಟುಂಬವನ್ನು ಸೇರಲು ಈ ಸಾಮಾಜಿಕ ಜಾಲತಾಣ ನೆರವಾಗಿದೆ.
ಸಾಮಾಜಿಕ ಜಾಲತಾಣದ ಪವರ್... 8 ವರ್ಷದ ಬಳಿಕ ಮನೆ ಸೇರಿದ ಮಾನಸಿಕ ಅಸ್ವಸ್ಥ - social media helps to found
ಕೇರಳದ ನೆರವಾರಂನ ನಿವಾಸಿ ಪ್ರಸಾದ್ ಎಂಬಾತ 8 ವರ್ಷದ ಹಿಂದೆ ಕುಟುಂಬದಿಂದ ತಪ್ಪಿಸಿಕೊಂಡಿದ್ದರು. ಇವರ ಫೋಟೋವನ್ನು ಮಂಗಳೂರಿನ ಅಡಿಕೆ ವ್ಯಾಪಾರಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಹೌದು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಳೆದ 8 ತಿಂಗಳಿಂದ ಪ್ರಸಾದ್ ಎಂಬ ಮಾನಸಿಕ ಅಸ್ವಸ್ಥ ರಸ್ತೆಯಲ್ಲಿ ಅಲೆದಾಡಿಕೊಂಡು ಎಲ್ಲೆಂದರಲ್ಲಿ ಮಲಗುತ್ತಿದ್ದ. ಈ ವ್ಯಕ್ತಿಯ ಫೋಟೋವನ್ನು ಸ್ಥಳೀಯ ಅಡಿಕೆ ವ್ಯಾಪಾರಿ ಫೇಸ್ ಬುಕ್ನಲ್ಲಿ ಆಪ್ ಲೋಡ್ ಮಾಡಿ, ಹೆಸರು ಹಾಗೂ ವಿಳಾಸ ಹಾಕಿದ್ದಾರೆ. ಇದು ವೈರಲ್ ಕೂಡ ಆಗಿದೆ.
ಕೂಡಲೇ ಕೇರಳದ ವಯನಾಡಿನ ನೆರವಾರಂನಲ್ಲಿರುವ ಈತನ ಕುಟುಂಬದ ಸದಸ್ಯರು ಪೋಟೋ ಗಮನಿಸಿ ಕೂಡಲೇ ತರೀಕೆರೆಗೆ ಬಂದು ಪ್ರಸಾದ್ ಅನ್ನು ಭೇಟಿಯಾಗಿ, ಮನೆಗೆ ಕರೆದುಕೊಂಡು ಹೋಗಿದ್ದಾರೆ. 8 ವರ್ಷಗಳ ಹಿಂದೆ ಪ್ರಸಾದ್ ಕೇರಳದ ಮನೆಯಿಂದ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಎಂದು ಹೇಳಿದ್ದಾರೆ. ಹುಡುಕಿಕೊಟ್ಟ ವ್ಯಾಪಾರಿಗೆ ಧನ್ಯವಾದ ತಿಳಿಸಿದ್ದಾರೆ.