ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ನಡುವೆ ಚಿಕ್ಕಮಗಳೂರು ತಾಲೂಕಿನ ಕೆಳಗೂರಿನಲ್ಲಿ ಅತ್ಯಂತ ಸರಳವಾಗಿ ಕುಟುಂಬ ಸದಸ್ಯರ ನಡುವೆ ವಿವಾಹ ನಡೆದಿದೆ.
ಮದುವೆಗೆ ಬಂದವರಿಗೆ ಮಾಸ್ಕ್ ವಿತರಿಸಿದ ಕಾಫಿನಾಡಿನ ನವ ಜೋಡಿ
ಕೊರೊನಾ ವೈರಸ್ ಭೀತಿ ನಡುವೆಯೂ ನವ ಜೀವನಕ್ಕೆ ಕಾಲಿಟ್ಟ ಜೋಡಿಯೂ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಲ್ಲದೇ ಬಂದವರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಮೆಚ್ಚುಗೆ ಪಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಳಗೂರಿನಲ್ಲಿ ನಡೆದಿದೆ.
ಸಾಮಾಜಿಕ ಅಂತರ ಕಾಪಾಡಿ, ಮದುವೆಗೆ ಬಂದವರಿಗೆ ಮಾಸ್ಕ್ ವಿತರಿಸಿದ ಕಾಫಿನಾಡಿನ ನವ ಜೋಡಿ
ಕೆಳಗೂರಿನ ಆಶಾ ತೀರ್ಥಹಳ್ಳಿ ರಮೇಶ್ ಅವರು ಇಂದು ಮದುವೆಯಾದ ನವ ಜೋಡಿಯಾಗಿದ್ದು, ಸಾಮಾಜಿಕ ಅಂತರ ಕಾಯ್ಡುಕೊಂಡು ಕುಟುಂಬ ಸದಸ್ಯರು ಹಾಗೂ ಬೆರಳೆಣಿಕೆಯಷ್ಟು ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ತಮ್ಮ ಮನೆಯ ಮುಂದೆಯೇ ಮದುವೆ ಆಗುವುದರ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ವಿವಾಹ ಮಹೋತ್ಸವದ ವಿಶೇಷ ಅಂದರೇ ಈ ಜೋಡಿಯ ಮದುವೆಗೆ ಆಗಮಿಸಿ ಶುಭ ಕೋರಲು ಬಂದಿದ್ದ ಪ್ರತಿಯೊಬ್ಬ ಸದಸ್ಯರಿಗೂ ಹೊಸ ಜೋಡಿಗಳು ಸೇರಿ ಮಾಸ್ಕ್ ವಿತರಣೆ ಮಾಡಿದರು. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ನವ ಜೋಡಿಗಳಿಗೆ ಮೆಚ್ಚುಗೆ ಸಹ ವ್ಯಕ್ತವಾಗಿದೆ.