ಚಿಕ್ಕಮಗಳೂರು:ಇವತ್ತೇ ಹಸೆಮಣೆ ಏರಿ ಬದುಕಿನ ಅಪರೂಪದ ಸಂಭ್ರಮದ ಕ್ಷಣಗಳನ್ನು ಸವಿಯಬೇಕಿದ್ದ ಯುವಕ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.
32 ವರ್ಷದ ಪೃಥ್ವಿರಾಜ್ ಸಾವನ್ನಪ್ಪಿದ ವ್ಯಕ್ತಿ. ಮದುವೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹತ್ತು ದಿನಗಳ ಹಿಂದೆ ಇವರು ಸ್ವಗ್ರಾಮಕ್ಕೆ ಆಗಮಿಸಿದ್ದರು.
ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಪೃಥ್ವಿರಾಜ್ಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಸೋಂಕು ಹರಡಿರುವುದು ದೃಢಪಟ್ಟಿದೆ. ಬರಬರುತ್ತಾ ಆರೋಗ್ಯ ತೀರಾ ಹದಗೆಟ್ಟಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪೃಥ್ವಿರಾಜ್ ಕೊನೆಯುಸಿರೆಳೆದಿದ್ದಾರೆ.
ಮದುವೆ ಸಂಭ್ರಮವಿರಬೇಕಿದ್ದ ಯುವಕನ ಮನೆಯಲ್ಲೀಗ ಸೂತಕದ ಛಾಯೆ ಅವರಿಸಿದೆ.