ಚಿಕ್ಕಮಗಳೂರು: ಡ್ರಗ್ಸ್ ನಶೆಯಲ್ಲಿ ಸ್ಯಾಂಡಲ್ ವುಡ್ ಸೊರಗುತ್ತಿದ್ದರೆ, ಇತ್ತ ಮಲೆನಾಡಲ್ಲಿ ತಿಂಡಿ ಮಾರಿದಂತೆ ಬೀದಿ-ಬೀದಿಯಲ್ಲಿ ಗಾಂಜಾ ಮಾರುತ್ತಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಪಟಾಕಿ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ತಾಲೂಕಿನ ಅಲ್ಲಂಪುರ ಗ್ರಾಮದ ನಾಗರಾಜ್ ಎಂದು ಗುರುತಿಸಲಾಗಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ ಬಂಧಿತನಿಂದ. 1 ಕೆ.ಜಿ. 280 ಗ್ರಾಂ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿಯು ಗಾಂಜಾವನ್ನ ಚಿಕ್ಕ-ಚಿಕ್ಕ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದನು. ಒಂದು ಪ್ಯಾಕೆಟ್ಗೆ 500 ರೂಪಾಯಿಯಂತೆ ನಗರದ ಯುವಕರು ಹಾಗೂ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಬಂಧಿತ ವ್ಯಕ್ತಿ ನಾಗರಾಜ್ ಗಾಂಜಾವನ್ನ ತುಂಬಿಕೊಂಡು ಬೈಕ್ನಲ್ಲಿ ಹೋಗುವಾಗ ರೆಡ್ ಹ್ಯಾಂಡಾಗಿ ನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರು ವಶಪಡಿಸಿಕೊಂಡಿರೋ ಗಾಂಜಾ ಬೆಲೆ 40 ಸಾವಿರ ಎಂದು ಅಂದಾಜಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.