ಚಿಕ್ಕಮಗಳೂರು: ಹಾಸ್ಟೆಲ್ ಊಟ ಸೇವಿಸಿದ ಸುಮಾರು 26 ವಿದ್ಯಾರ್ಥಿನಿಯರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಕಳಪೆ ಗುಣಮಟ್ಟದ ಆಹಾರ ಸೇವನೆಯೇ ಘಟನೆಗೆ ಮುಖ್ಯ ಕಾರಣವೆಂದು ಎಂದು ಪೋಷಕರು ದೂರಿದ್ದಾರೆ.
ರಾತ್ರಿ ಊಟವಾದ ಬಳಿಕ ವಿದ್ಯಾರ್ಥಿನಿಯರಿಗೆ ವಾಂತಿ, ಬೇಧಿಯಾಗಿದ್ದು ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿನಿಯರು ಇದೀಗ ಚೇತರಿಸಿಕೊಂಡಿದ್ದು, ಪೋಷಕರು ನಿರಾಳವಾಗಿದ್ದಾರೆ.
ತರೀಕೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿಯರು ಅಸ್ವಸ್ಥ ತರೀಕೆರೆ ಶಾಸಕ ಡಿ ಎಸ್ ಸುರೇಶ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಯನ್ನು ಅಡುಗೆಗೆ ಬಳಸಿರುವ ಹಾಗೂ ಸಾಮಗ್ರಿ ಪೂರೈಕೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪೋಷಕರು ಶಾಸಕರೆದುರು ಆತಂಕ ತೋಡಿಕೊಂಡರು. ಇಂಥ ಘಟನೆ ಮರುಕಳಿಸಿದಂತೆ ಎಚ್ಚರಿಕೆ ವಹಿಸಲಾಗುವುದು, ವಸತಿ ನಿಲಯದ ಸಿಬ್ಬಂದಿ ವಿರುದ್ಧ ಕ್ರಮವಹಿಸುವ ಭರವಸೆಯನ್ನು ಶಾಸಕರು ನೀಡಿದರು.
ಇದನ್ನೂ ಓದಿ:ನಾಯಿ ಮರಿಗೆ ನಾಮಕರಣ..ತೊಟ್ಟಿಲು ತೂಗಿ ಜೋಗುಳ ಹಾಡಿದ ಮಹಿಳೆಯರು