ಚಿಕ್ಕಮಗಳೂರು:ಬಿಇಒ ಕಚೇರಿಯ ವ್ಯವಸ್ಥಾಪಕ ಅಧಿಕಾರಿ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಕಡೂರು ತಾಲೂಕು ಮೂಲದ ನಿಂಗ ನಾಯಕ (57) ಮೃತರು. ಕಚೇರಿಯಲ್ಲೇ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿ ಕಳೆದ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅವರು ಇಂದು ಸಾವಿಗೆ ಶರಣಾಗಿದ್ದಾರೆ.
ಚಿಕ್ಕಮಗಳೂರು: ಬಿಇಒ ಕಚೇರಿಯಲ್ಲೇ ವ್ಯವಸ್ಥಾಪಕ ಅಧಿಕಾರಿ ಆತ್ಮಹತ್ಯೆ - Chikkamagaluru Crime news
ವ್ಯವಸ್ಥಾಪಕ ಅಧಿಕಾರಿಯೊಬ್ಬರು ಡೆತ್ನೋಟ್ ಬರೆದಿಟ್ಟು, ಬಿಇಒ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಚಿಕ್ಕಮಗಳೂರು: ಬಿಇಒ ಕಚೇರಿಯಲ್ಲೇ ವ್ಯವಸ್ಥಾಪಕ ಅಧಿಕಾರಿ ಆತ್ಮಹತ್ಯೆ
Published : Jan 1, 2024, 6:36 PM IST
ಸೋಮವಾರ ಬೆಳಗ್ಗೆ ಮನೆಗೆ ಹಾಲು ತಂದು ಕೊಟ್ಟ ನಿಂಗ ನಾಯಕ, ಮನೆಯಲ್ಲಿ ವಾಕಿಂಗ್ ಹೋಗಿ ಬರ್ತೀನಿ ಎಂದು ಹೇಳಿ ಕಚೇರಿಗೆ ಹೋಗಿದ್ದರು. ಅಲ್ಲಿಯೇ ಸಾವಿಗೆ ಶರಣಾಗಿದ್ದಾರೆ. ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಹಾಸನ: ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ, ರಕ್ಷಿಸಲು ಹೋದ ಪತಿಯೂ ಸಾವು