ಚಿಕ್ಕಮಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಗೆ ವ್ಯಕ್ತಿವೋರ್ವ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಹೋದರನ ಕೊರೊನಾ ಪರೀಕ್ಷೆಯ ಗೊಂದಲ ಕುರಿತು ವಿಚಾರಿಸುವ ನೆಪದಲ್ಲಿ ಕರೆ ಮಾಡಿದ್ದ ವ್ಯಕ್ತಿ, ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ಗೆ ಏಕವಚನದಲ್ಲೇ ನಿಂದಿಸಿದ್ದಾನೆ.
ಕೊರೊನಾ ವಾರಿಯರ್ಗೆ ನಿಂದಿಸಿದ ವ್ಯಕ್ತಿ ಇದೀಗ ಈ ಆಡಿಯೋ ಜನರ ಮೊಬೈಲ್ಗಳಲ್ಲಿ ಹರಿದಾಡುತ್ತಿದೆ. ಈ ರೀತಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿರುವುದು ಅಜ್ಜಂಪುರ ತಾಲೂಕಿನ ಅಣ್ಣೆ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ.
ವೀರೇಶ್ ಸಹೋದರನಿಗೆ ಕೊರೊನಾ ದೃಢವಾಗಿತ್ತು. ಆದರೆ ಆರೋಗ್ಯಾಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕೊರೊನಾ ಪಾಸಿಟಿವ್ ವರದಿ ನೀಡಿದ್ದಾರೆಂದು ಆರೋಪಿಸಿ ಮಹಿಳಾ ಅಧಿಕಾರಿಗೆ ನಿಂದಿಸಿದ್ದಾನೆ. ಕೊರೊನಾ ವಾರಿಯರ್ಗೆ ಈ ರೀತಿ ಅವಾಚ್ಯ ಶಬ್ಧ ಬಳಸಿರುವುದಕ್ಕೆ ಸೂಕ್ತ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರಿಂದ ಆಗ್ರಹ ಕೇಳಿಬರುತ್ತಿದೆ.