ಚಿಕ್ಕಮಗಳೂರು:ವಿದ್ಯುತ್ ತಂತಿ ಸರಿ ಪಡಿಸುತ್ತಿದ್ದ ವೇಳೆ ಏಕಾ ಏಕೀ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಸಿ ತೋಟ ಎಂಬಲ್ಲಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ಒಬ್ಬನ ಸಾವು ಮತ್ತೋರ್ವನ ಸ್ಥಿತಿ ಗಂಭೀರ - undefined
ವಿದ್ಯುತ್ ತಂತಿ ಸರಿ ಪಡಿಸುತ್ತಿದ್ದ ವೇಳೆ ಏಕಾ ಏಕೀ ವಿದ್ಯುತ್ ಹರಿದು ಸ್ಥಳದಲ್ಲಿಯೇ ಲೈನ್ ಮ್ಯಾನ್ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಇನ್ನು ಈ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರವಾಗಿ ಗಾಯಗಳಾಗಿವೆ. ಮೂಡಿಗೆರೆ ತಾಲೂಕಿನ ಬಣಕಲ್ ವಿದ್ಯುತ್ ವಿತರಣಾ ಕೇಂದ್ರದ ಸಮೀಪದ ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿತೋಟ ಎಂಬಲ್ಲಿ ವಿದ್ಯುತ್ ತಂತಿ ಸರಿ ಪಡಿಸುವ ವೇಳೆ ಏಕಾ ಏಕೀ ವಿದ್ಯುತ್ ಪ್ರವಹಿಸಿದೆ.
ತಂತಿಯಲ್ಲಿ ತಕ್ಷಣ ವಿದ್ಯುತ್ ಬಂದ ಕಾರಣ ಲೋಕೇಶ್ (25) ಎಂಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡ ಸಿದ್ದೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.