ಕರ್ನಾಟಕ

karnataka

ETV Bharat / state

ಕಡೂರಿನಲ್ಲಿ ಮಳೆಗೆ ಮನೆ ಕುಸಿತ, ಓರ್ವ ವ್ಯಕ್ತಿ ಸಾವು - ಯಗಟಿಪುರದಲ್ಲಿ ಮನೆ ಕುಸಿತ

ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಗೋಡೆ ಕುಸಿದು ಬೀಳುವ ಘಟನೆಗಳು ಚಿಕ್ಕಮಗಳೂರಿನಲ್ಲಿ ವರದಿಯಾಗಿವೆ.

man-died-by-house-collapse-in-chikkamagalore
ಭಾರೀ ಮಳೆಯಿಂದಾಗಿ ಮನೆ ಕುಸಿತವಾಗಿದೆ

By

Published : Nov 22, 2021, 9:42 PM IST

ಚಿಕ್ಕಮಗಳೂರು:ಭಾರೀ ಮಳೆ (Heavy rain in Chikkamagalore) ಹಿನ್ನೆಲೆಯಲ್ಲಿ ಮನೆಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರದಲ್ಲಿ ನಡೆದಿದೆ.


ಭೋವಿ ಕಾಲೋನಿಯ ಮಂಜುನಾಥ್ (45) ಮೃತರು. ರಾತ್ರಿ ಮಲಗಿದ್ದ ವೇಳೆ ಮನೆಗೋಡೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಯಗಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿಢೀರ್ ಮನೆ ಕುಸಿತ: ಪ್ರಾಣಾಪಾಯದಿಂದ ಪಾರು

ಮೂಡಿಗೆರೆ ತಾಲೂಕಿನ ದೇವರಮಕ್ಕಿ ಗ್ರಾಮದಲ್ಲೂ ಮನೆ ಕುಸಿದಿದೆ. ದೀಪ ಎಂಬುವರಿಗೆ ಸೇರಿದ ಮನೆ ಕುಸಿತವಾಗಿದ್ದು, ಅದೃಷ್ಟವಶಾತ್ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಗಂಡನ ವಿರುದ್ಧ ದೂರು ದಾಖಲಿಸಲು ಬಂದ ಮಹಿಳೆ ಮೇಲೆಯೇ ಬಿತ್ತು ಕೇಸ್.. ಕಾರಣ?

ABOUT THE AUTHOR

...view details