ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು : ಎತ್ತಿನ ಗಾಡಿ ಹರಿದು ವ್ಯಕ್ತಿ ಸಾವು! - man died as bullock cart ran over him

ಅಂತರಘಟ್ಟಮ್ಮ ಜಾತ್ರೆಗೆ ಹೋಗುವ ವೇಳೆಯಲ್ಲಿ ಎರಡು ಎತ್ತಿನ ಗಾಡಿಗಳ ಪೈಪೋಟಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಎತ್ತಿನಗಾಡಿ ಹರಿದು ಅವರು ಸಾವನ್ನಪ್ಪಿದ್ದಾರೆ..

man died as bullock cart ran over him in chikmagaluru
ಎತ್ತಿನ ಗಾಡಿ ಹರಿದು ವ್ಯಕ್ತಿ ಸಾವು

By

Published : Feb 13, 2022, 4:43 PM IST

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಅಂತರಘಟ್ಟಮ್ಮ ಜಾತ್ರೆ ನಡೆಯುತ್ತಿದೆ. ಇಲ್ಲಿಗೆ ಭಕ್ತರು ಎತ್ತಿನಗಾಡಿಯಲ್ಲಿ ಬರುತ್ತಾರೆ. ಜಾತ್ರೆಗೆ ಹೋಗುವ ವೇಳೆಯಲ್ಲಿ ಎರಡು ಎತ್ತಿನ ಗಾಡಿಗಳ ಪೈಪೋಟಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಎತ್ತಿನಗಾಡಿ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಂತರಘಟ್ಟಮ್ಮ ಜಾತ್ರೆಗೆ ಬರುವ ಎತ್ತಿನಗಾಡಿಗಳು ಮತ್ತು ಅವಘಡಗಳು

ಇದನ್ನೂ ಓದಿ:ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣ : ಗಂಡ ಮತ್ತು ಕುಟುಂಬಸ್ಥರ ಬಂಧನಕ್ಕೆ ಆಗ್ರಹ

ಅಜ್ಜಂಪುರ ತಾಲೂಕಿನ ಅಬ್ಬಿನ ಹೊಳಲು ಗ್ರಾಮದ ಜಕಣಾಚಾರಿ (49) ಎಂಬುವರು ಸಾವನ್ನಪ್ಪಿದ್ದಾರೆ. ಜೋರಾಗಿ ಎತ್ತಿನಗಾಡಿ ಓಡಿಸುವ ಸಂದರ್ಭದಲ್ಲಿ ರಾಸುಗಳಿಗೂ ಪೆಟ್ಟಾಗಿವೆ.

ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details