ಕರ್ನಾಟಕ

karnataka

By

Published : Aug 24, 2019, 11:32 AM IST

ETV Bharat / state

ಪ್ರಕೃತಿ ಮುನಿದ್ರೂ ನಾವ್‌ ನಿಮ್ಮ ಜತೆಗಿರುವೆವು.. ಸಂತ್ರಸ್ತರಿಗಾಗಿ ಈಗಲೂ ಮಿಡಿಯುವ ಮಲೆನಾಡಿಗರು..

ಜಿಲ್ಲೆಯ ಹಲವೆಡೆ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಕ್ಷರಶಃ ತತ್ತರಿಸಿದೆ. ಆದರೆ, ಎಲ್ಲವನ್ನೂ ಕಳೆದುಕೊಂಡು ದಿಕ್ಕೇ ತೋಚದೆ ನಲುಗುತ್ತಿರುವ ಸಂತ್ರಸ್ತರ ನೆರವಿಗೆ ಹಲವರು ಧಾವಿಸಿ ಬರುತ್ತಿರುವುದು ಅವರಿಗೆ ಬದುಕುವ ಆತ್ಮಸ್ಥೈರ್ಯ ತುಂಬಿದಂತಾಗುತ್ತಿದೆ.

ತಮ್ಮವರ ಸಹಾಯಕ್ಕಾಗಿ ಇಂದಿಗೂ ದುಡಿಯುತ್ತಿರುವ ಮಲೆನಾಡಿಗರು

ಚಿಕ್ಕಮಗಳೂರು:ಭಾರಿ ಮಳೆಯಿಂದ ಚಿಕ್ಕಮಗಳೂರಿನ ಹಲವೆಡೆ ಅದರಲ್ಲೂ ಮೂಡಿಗೆರೆ ಭಾಗದಲ್ಲಿ ಆಗಿರುವ ಅವಾಂತರದಿಂದ ದಿಕ್ಕಾಪಾಲಾಗಿರುವ ಸಂತ್ರಸ್ತರ ನೆರವಿಗಾಗಿ ಮೂಡಿಗೆರೆಯ ಸ್ಥಳೀಯರು ಹಾಗೂ ಇತರ ಜಿಲ್ಲೆಯ ಜನರು ಹಾಗೂ ಸಂಘ ಸಂಸ್ಥೆಗಳು ಇಂದಿಗೂ ಕೂಡ ಶ್ರಮಿಸುತ್ತಲೇ ಇವೆ.

ತಮ್ಮವರ ಸಹಾಯಕ್ಕಾಗಿ ಇಂದಿಗೂ ದುಡಿಯುತ್ತಿರುವ ಮಲೆನಾಡಿಗರು..

ಜಿಲ್ಲೆಯ ಹಲವೆಡೆ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಕ್ಷರಶಃ ತತ್ತರಿಸಿದೆ. ಆದರೆ, ಎಲ್ಲವನ್ನೂ ಕಳೆದುಕೊಂಡು ದಿಕ್ಕೇ ತೋಚದೆ ನಲುಗುತ್ತಿರುವ ಸಂತ್ರಸ್ತರ ನೆರವಿಗೆ ಹಲವರು ಧಾವಿಸಿ ಬರುತ್ತಿರುವುದು ಅವರಿಗೆ ಬದುಕುವ ಆತ್ಮಸ್ಥೈರ್ಯ ತುಂಬಿದಂತಾಗುತ್ತಿದೆ. ಅದರಲ್ಲೂ ನಮ್ಮ ಊರು, ನಮ್ಮವರು ಎಂಬ ಬಾಂಧವ್ಯದಿಂದ ಮಲೆನಾಡಿಗರೇ ತಮ್ಮವರಿಗೆ ಸಾಕಷ್ಟು ನೆರವನ್ನು ನೀಡುತ್ತಿರುವುದು ಅವರ ತಮ್ಮತನಕ್ಕೆ ಸಾಕ್ಷಿಯಾಗಿದೆ.

ಮಲೆನಾಡು ಭಾಗದಲ್ಲಿ ಹಾನಿಗೊಳಗಾದ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ಕೆಲಸ ಮುಂದುವರೆದಿದ್ದು, ಮೂಡಿಗೆರೆ ಸ್ಥಳೀಯ ಯುವಕರು ವಿವಿಧ ತಂಡಗಳನ್ನು ರಚಿಸಿಕೊಂಡು ಈ ಕಾರ್ಯದಲ್ಲಿ ಪ್ರತಿನಿತ್ಯ ಶ್ರಮಿಸುತ್ತಲೇ ಇದ್ದಾರೆ. ಪ್ರಮುಖವಾಗಿ ಕೋಣೆಬೈಲು, ಬಿಲ್ಗೋಡು, ಹಿರೇಬೈಲು, ಬಸರಿಮಕ್ಕಿ, ಬಲಿಗೆ, ಮಧುಗುಂಡಿ, ಸಂಸೆ, ಕಳಕೋಡು, ದೇವರಗುಡ್ಡ ಈ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಅಗತ್ಯ ಇರುವಂತಹ ಅಕ್ಕಿ, ಬೇಳೆ, ಚಾಪೆ, ದಿನ ನಿತ್ಯದ ವಸ್ತುಗಳು, ಮಕ್ಕಳಿಗೆ ಪುಸ್ತಕ, ಬ್ಯಾಗು ಇನ್ನಿತರೇ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ.

ABOUT THE AUTHOR

...view details