ಚಿಕ್ಕಮಗಳೂರು:ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಇದರ ನಡುವೆಯೇ ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆಯ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ.
ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಯ್ತು ಮಲೆನಾಡಿನ ಗದ್ದೆ ನಾಟಿ ದೃಶ್ಯ - Chikkamagaluru planting scene
ಮಲೆನಾಡು ಭಾಗದಲ್ಲಿ ಭತ್ತದ ನಾಟಿ, ಬಿತ್ತುವ ಕಾರ್ಯ ಆರಂಭವಾಗಿದೆ. ನಾಟಿ ಕೆಲಸಕ್ಕೆ ಆಗಮಿಸಿರುವ ಹತ್ತಾರು ಮಹಿಳೆಯರು ನಾಟಿ ಮಾಡುವ ಜೊತೆಗೆ ಜನಪದ ಗೀತೆಗಳನ್ನು ಹಾಡುತ್ತಾ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಮನಸ್ಸಿನ ಉಲ್ಲಾಸಕ್ಕಾಗಿ ಈ ರೀತಿ ಜನಪದ ಹಾಡುಗಳನ್ನು ಹಾಡುವ ಪದ್ಧತಿ ಹಿಂದಿನಿಂದಲೂ ಮಹಿಳೆಯರು ಪಾಲಿಸಿಕೊಂಡು ಬಂದಿದ್ದಾರೆ.
ಮಲೆನಾಡು ಭಾಗದಲ್ಲಿ ಭತ್ತದ ನಾಟಿ, ಬಿತ್ತನೆ ಕಾರ್ಯ ಆರಂಭವಾಗಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಕೊಡೆಬೈಲ್ ನ ಮೋಹನ್ ಗೌಡ ಅವರ ಗದ್ದೆಯಲ್ಲಿ ಮಹಿಳೆಯರಿಂದ ವಿಶೇಷವಾಗಿ ನಾಟಿ ಕಾರ್ಯ ಮಾಡಿಸಲಾಗುತ್ತಿದೆ. ಈ ನಾಟಿ ಕೆಲಸಕ್ಕೆ ಆಗಮಿಸಿರುವ ಹತ್ತಾರು ಮಹಿಳೆಯರು ನಾಟಿ ಮಾಡುವ ಜೊತೆಗೆ ನಾಟಿಯ ಜನಪದ ಗೀತೆಗಳನ್ನು ಹಾಡುತ್ತಾ, ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಮನಸ್ಸಿನ ಉಲ್ಲಾಸಕ್ಕಾಗಿ ಈ ರೀತಿ ಜನಪದ ಹಾಡುಗಳನ್ನು ಹಾಡುವ ಪದ್ದತಿ ಹಿಂದಿನಿಂದಲೂ ಮಹಿಳೆಯರು ಪಾಲಿಸಿಕೊಂಡು ಬಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಾಂತ್ರೀಕರಣ ವ್ಯವಸಾಯ ಹೆಚ್ಚಾದ ಹಿನ್ನೆಲೆ ಈ ರೀತಿಯ ಪದ್ದತಿಗಳು ತುಂಬಾನೆ ವಿರಳ. ಮಲೆನಾಡು ಪ್ರದೇಶದ ಕೆಲವೆಡೆ ಈ ರೀತಿಯ ಪುರಾತನ ವ್ಯವಸಾಯ ಪದ್ಧತಿಯನ್ನು ಇಂದಿಗೂ ಅನುಸರಿಸುತ್ತಿರುವುದು ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಗಿದೆ.