ಚಿಕ್ಕಮಗಳೂರು: ಪ್ರೇಮಿಗಳ ದಿನ ಭಾವಿ ದಂಪತಿ ದೇಶ ಪ್ರೇಮ ಮೆರೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಉಂಗುರದ ಬದಲು ಭಾರತ ಮಾತೆಯ ಫೋಟೋ ಬದಲಾಯಿಸಿಕೊಂಡು ಪ್ರೇಮಿಗಳ ನಿಶ್ಚಿತಾರ್ಥ! - ಚಿಕ್ಕಮಗಳೂರು
ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಎಂಬುವರ ನಿಶ್ಚಿತಾರ್ಥ ತುಂಬಾ ವಿಶೇಷವಾಗಿ ನಡೆದಿದೆ. ಉಂಗುರದ ಬದಲು ಭಾರತ ಮಾತೆಯ ಫೋಟೋವನ್ನು ಭಾವಿ ದಂಪತಿ ಅದಲು ಬದಲು ಮಾಡಿಕೊಂಡಿಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
![ಉಂಗುರದ ಬದಲು ಭಾರತ ಮಾತೆಯ ಫೋಟೋ ಬದಲಾಯಿಸಿಕೊಂಡು ಪ್ರೇಮಿಗಳ ನಿಶ್ಚಿತಾರ್ಥ! chikkamagalore](https://etvbharatimages.akamaized.net/etvbharat/prod-images/768-512-10623674-thumbnail-3x2-net.jpg)
ಉಂಗುರದ ಬದಲು ಭಾರತ ಮಾತೆಯ ಪೋಟೋ ಬದಲಾಯಿಸಿಕೊಂಡು ನಿಶ್ಚಿತಾರ್ಥ
ಉಂಗುರದ ಬದಲು ಭಾರತ ಮಾತೆಯ ಫೋಟೋ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡ ಪ್ರೇಮಿಗಳು
ನಗರದ ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಇಬ್ಬರೂ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗಿ ಆಗಿದ್ದು, ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದಲ್ಲಿ ಉಂಗುರದ ಬದಲು ಭಾರತ ಮಾತೆಯ ಫೋಟೋ ಅದಲು ಬದಲು ಮಾಡಿಕೊಂಡು ದೇಶ ಪ್ರೇಮ ಮೆರೆದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರು ಸಮೀಪ ನಿಶ್ಚಿತಾರ್ಥ ನಡೆದಿದ್ದು, ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.