ಚಿಕ್ಕಮಗಳೂರು:ಆಕಾಶದಲ್ಲೋ, ಮರಗಳ ಮೇಲೋ ಒಂದೆರೆಡು ಬೆಳ್ಳಕ್ಕಿಗಳನ್ನು ನೋಡಿದರೆ ಮನಸ್ಸಿಗೆ ಖುಷಿಯಾಗುತ್ತದೆ. ಆದರೆ ಕಾಫಿನಾಡನಲ್ಲಿ ಬೆಳ್ಳಕ್ಕಿಗಳ ಪ್ರಪಂಚವೇ ಸೃಷ್ಟಿಯಾಗಿದ್ದು, ಇದನ್ನು ನೋಡಿದರೆ ನಿಜಕ್ಕೂ ನೀವು ಖಂಡಿತ ಪುಳಕಿತರಾಗುತ್ತೀರಿ.
ಕಾಫಿನಾಡಲ್ಲಿ ಬೆಳ್ಳಕ್ಕಿಗಳ ಹಿಂಡು ಹೌದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಬೆಳ್ಳಕ್ಕಿಗಳ ಪ್ರಪಂಚ ಸೃಷ್ಟಿಯಾಗಿದೆ. ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಪಕ್ಕದ ಮರಗಳಲ್ಲಿ ಬೇರೆ ಬೇರೆ ಕಡೆಗಳಿಂದ ಬೆಳ್ಳಕ್ಕಿಗಳು ಬಂದು ನೆಲೆಸಿವೆ. ಇವುಗಳ ಹಾರಾಟ, ಸೌಂದರ್ಯು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ.
ಕಾಫಿನಾಡಿನಲ್ಲಿ ಸೃಷ್ಟಿಯಾಗಿದೆ ಬೆಳ್ಳಕ್ಕಿಗಳ ಪ್ರಪಂಚ ಪ್ರತಿವರ್ಷವೂ ಚಳಿಗಾಲದಲ್ಲಿ ಬೆಳ್ಳಿಕ್ಕಿಗಳು ಬರುತ್ತವೆ. ಇಲ್ಲಿನ ಸುತ್ತಮುತ್ತಲಿನ ಭತ್ತದ ಗದ್ದೆ, ಹಳ್ಳ-ಕೊಳ್ಳಗಳಲ್ಲಿ ಮೀನು, ಸಣ್ಣ-ಪುಟ್ಟ ಕೀಟಗಳನ್ನು ತಿಂದು ಸಂಜೆಯಾಗುತ್ತಲೇ ಮರಗಳ ಮೇಲೇರಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆಯುತ್ತಿವೆ. ಬೆಳಗಿನ ಜಾವ 6 ಗಂಟೆ ಹಾಗೂ ಸಂಜೆ 6 ರ ವೇಳೆಯ ಅಸುಪಾಸಿನಲ್ಲಿ ಹಸಿರು ಚೆಲ್ಲಿ ನಿಂತಿರುವ ಮರಗಳ ಮೇಲೆ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಹಾರಾಡುವ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸುತ್ತದೆ.
ಕಾಫಿನಾಡಿನಲ್ಲಿ ಸೃಷ್ಟಿಯಾಗಿದೆ ಬೆಳ್ಳಕ್ಕಿಗಳ ಪ್ರಪಂಚ ಓದಿ: ರಾಜ್ಯದ 2 ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಇಂದು ಪ್ರಧಾನಿ ಮೋದಿಯಿಂದ ಸಿಗಲಿದೆ ಚಾಲನೆ
ಪ್ರತಿ ಬಾರಿ ಡಿಸೆಂಬರ್ ವೇಳೆಗೆ ನಾನಾ ಪ್ರದೇಶಗಳಿಂದ ಬರುವ ಬೆಳ್ಳಕ್ಕಿಗಳು ಜನವರಿ ತಿಂಗಳು ಕಳೆದು ಫೆಬ್ರವರಿ ಬಳಿಕ ಬೇರೆಡೆಗೆ ಜಾಗ ಬದಲಾಯಿಸುತ್ತವೆ. ಮಲೆನಾಡು ಭಾಗದಲ್ಲಿ ಈ ವೇಳೆ ಭತ್ತದ ಕಟಾವು ನಡೆಯುವುದರಿಂದ ಸಹಜವಾಗಿಯೇ ಬೆಳ್ಳಕ್ಕಿಗಳು ಇಲ್ಲಿ ನೆಲೆಸಿ ವಂಶಾಭಿವೃದ್ಧಿ ನಡೆಸಿ ಬೇರೆ ಸ್ಥಳಕ್ಕೆ ಪಯಣ ಬೆಳೆಸುತ್ತವೆ. ಹೀಗೆ ಒಂದೆಡೆ ಸಾವಿರಾರು ಬೆಳ್ಳಕ್ಕಿಗಳು ಒಟ್ಟಿಗೆ ಸೇರಿ ಮಲೆನಾಡಿನ ಚುಮು,ಚುಮು ಚಳಿಯ ಮಂಜಿಗೆ ಮತ್ತಷ್ಟು ರಂಗು ನೀಡಿವೆ. ಸ್ಥಳೀಯರು ಸೇರಿದಂತೆ ಪಕ್ಷಿ ಪ್ರಿಯರ ಪಾಲಿನ ನೆಚ್ಚಿನ ತಾಣವಾಗಿ ಇದೀಗ ಕೃಷಿ ಪತ್ತಿನ ಸಹಕಾರ ಸಂಘ ಮಾರ್ಪಟ್ಟಿದೆ.