ಕರ್ನಾಟಕ

karnataka

ETV Bharat / state

ಏರುಪೇರಾದ ವೇಳಾಪಟ್ಟಿಗೆ ಹಳ್ಳ ಹಿಡಿದ ಚಿಕ್ಕಮಗಳೂರು ರೈಲ್ವೆ ವ್ಯವಸ್ಥೆ - ಚಿಕ್ಕಮಗಳೂರು ಲೇಟೆಸ್ಟ್​ ನ್ಯೂಸ್

ಅನೇಕ ಹೋರಾಟಗಳ ಫಲವಾಗಿ 2014 ರಲ್ಲಿ ಕಾಫಿನಾಡಿನಲ್ಲಿ ರೈಲು ಸಂಚಾರ ಆರಂಭವಾಯಿತು. ಆದರೆ, ಕ್ಷೇತ್ರದ ರಾಜಕೀಯ ನಾಯಕರ ನಿರ್ಲಕ್ಷ್ಯ ಹಾಗೂ ಸರಿಯಾದ ಸಮಯಕ್ಕೆ ರೈಲುಗಳ ಸಂಚಾರ ಇಲ್ಲದೇ ಇಲಾಖೆ ಸಾಕಷ್ಟು ನಷ್ಟ ಅನುಭವಿಸುತ್ತಿದೆ.

ಚಿಕ್ಕಮಗಳೂರು ರೈಲ್ವೆ ನಿಲ್ದಾಣ
Chikkamagaluru Railway Station

By

Published : Feb 22, 2021, 7:38 PM IST

ಚಿಕ್ಕಮಗಳೂರು: ಹತ್ತಾರೂ ವರ್ಷಗಳ ಹೋರಾಟದ ಫಲವಾಗಿ ಜಿಲ್ಲೆಗೆ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ರೈಲುಗಳು ಸಂಚಾರ ಮಾಡುವ ಸಮಯವೇ ಸರಿ ಇರದ ಕಾರಣ ಆರಂಭದಿಂದಲೂ ಇಲಾಖೆ ನಷ್ಟದಲ್ಲಿದ್ದು, ಇದೀಗ ಶಾಶ್ವತವಾಗಿ ನಿಲ್ಲುತ್ತದೆ ಎಂಬ ಸುದ್ದಿ ಜನರನ್ನು ಕಂಗಾಲಾಗಿಸಿದೆ.

ಏರುಪೇರಾದ ವೇಳಾಪಟ್ಟಿಗೆ ಹಳ್ಳ ಹಿಡಿದ ಚಿಕ್ಕಮಗಳೂರು ರೈಲ್ವೆ ವ್ಯವಸ್ಥೆ

1977ರ ಇಂದಿರಾಗಾಂಧಿ ಅವರ ಕಾಲದಿಂದ ಆರಂಭವಾಗಿ 1998ರ ದೇವೇಗೌಡರ ಹೋರಾಟದ ಫಲವಾಗಿ 2014 ರಲ್ಲಿ ಕಾಫಿನಾಡಿನಲ್ಲಿ ರೈಲು ಆರಂಭವಾಯಿತು. ಆದರೆ, ಇಲ್ಲಿ ಸಂಚರಿಸುವ ರೈಲಿಗಳಿಗೆ ಸರಿಯಾದ ವೇಳಾಪಟ್ಟಿ ಇಲ್ಲ. ಹೀಗಾಗಿ ರೈಲು ಎಲ್ಲರೂ ಮಲಗಿದ ಮೇಲೆ ಬರುತ್ತದೆ, ಏಳುವ ಮುನ್ನವೇ ಹೊರಡುತ್ತದೆ. ಕೊರೊನಾ ಕಾರಣದಿಂದ ಕಳೆದೊಂದು ವರ್ಷದಿಂದ ಶಾಶ್ವತವಾಗಿ ನಿಂತು ಬಿಟ್ಟಿದೆ. ಆದರೆ, ಆರಂಭದಿಂದಲೇ ನಷ್ಟದಲ್ಲಿ ಸಂಚರಿಸುತ್ತಿರುವ ರೈಲನ್ನು ಇದೀಗ ಶಾಶ್ವತವಾಗಿ ನಿಲ್ಲಿಸಲಾಗುತ್ತದೆ ಎಂಬ ವಿಚಾರ ತಿಳಿದು ಜನರು ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು ರೈಲ್ವೆ ನಿಲ್ದಾಣ

ಈ ರೈಲು 4 -5 ಗಂಟೆಗೆ ಬೆಂಗಳೂರು ತಲುಪಿ, ಅಲ್ಲಿಂದ ಅದೇ ಸಮಯದಲ್ಲಿ ಚಿಕ್ಕಮಗಳೂರಿಗೆ ಬರುವಂತೆ ಬೆಳಗ್ಗೆ - ಸಂಜೆ ಎರಡು ರೈಲು ಇದ್ದರೆ ನಿಲ್ಲೋದಕ್ಕೂ ಜಾಗವಿಲ್ಲದಂತೆ ಜನ ಇರುತ್ತಾರೆ. ಆಗ ನಷ್ಟವಾಗುವುದಿಲ್ಲ. ಜೊತೆಗೆ ಎರಡ್ಮೂರು ಗೂಡ್ಸ್ ಗಾಡಿಗಳೂ ಓಡಾಡಿದರೆ ಜನರಿಗೆ ಅನುಕೂಲವಾಗುತ್ತೆ ಎಂದೂ ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿಗಿಂತ ಹೆಚ್ಚಾಗಿ ವಾಣಿಜ್ಯ ಬೆಳೆಗಳ ಮೇಲೆ ಅವಲಂಬಿತವಾಗಿರುವ ಚಿಕ್ಕಮಗಳೂರು ಜಿಲ್ಲೆ ವಾರ್ಷಿಕ ನೂರಾರು ಕೋಟಿಯ ಕಾಫಿ, ಅಡಕೆ, ಮೆಣಸು, ತೆಂಗಿನಕಾಯಿ ವಹಿವಾಟು ನಡೆಸುತ್ತದೆ. ರೈಲ್ವೆ ಇಲಾಖೆ ಸಮರ್ಪಕವಾಗಿ ರೈಲನ್ನು ಬಿಟ್ಟಿದ್ದೇ ಆದಲ್ಲಿ ಗೂಡ್ಸ್ ರೈಲಿನಿಂದಲೂ ಕೂಡ ಸಾಕಷ್ಟು ಲಾಭ ಮಾಡಬಹುದು. ಬೆಳೆ, ರಸಗೊಬ್ಬರ ಸಾಗಾಟಕ್ಕೂ ಗೂಡ್ಸ್ ರೈಲು ಅನಿವಾರ್ಯವಿದೆ.

ಚಿಕ್ಕಮಗಳೂರು ರೈಲ್ವೆ ನಿಲ್ದಾಣ

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮಕ್ಕೂ ತುಂಬಾ ಹೆಸರುವಾಸಿಯಾಗಿದೆ. ಜಿಲ್ಲೆಗೆ ನಿತ್ಯ ಸಾವಿರಾರೂ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಹೀಗಿರುವಾಗ ರೈಲು ಯಾವುದಕ್ಕೂ ಪ್ರಯೋಜನವಿಲ್ಲದೇ ನಷ್ಟ ಅನುಭವಿಸುತ್ತಿದೆ. ಸರಿಯಾದ ವೇಳಾಪಟ್ಟಿ ನಿಗದಿ ಮಾಡಿ ರೈಲುಗಳ ಸಂಚಾರ ನಡೆಸಿದರೆ ಪ್ರವಾಸಿಗರಿಗೂ ಮತ್ತು ಸಾರ್ವಜನಿಕರಿಗೂ ತುಂಬಾ ಅನುಕೂಲ ಆಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ABOUT THE AUTHOR

...view details