ಚಿಕ್ಕಮಗಳೂರು :ನಾಳೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣವಾಗಿ ಲಾಕ್ಡೌನ್ ಇರಲಿದೆ. ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿರುವ, ದಿನಸಿ ಅಂಗಡಿಗಳು, ಮೆಡಿಕಲ್ ಸ್ಟೋರ್, ಹಣ್ಣಿನ ಅಂಗಡಿಗಳು ತೆರೆದಿರುತ್ತವೆ ಎಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
ಅಗತ್ಯವಿದ್ದರೆ ಮಾತ್ರ ಹೊರಬನ್ನಿ : ಚಿಕ್ಕಮಗಳೂರು ಡಿಸಿ - ನಾಳೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣವಾಗಿ ಲಾಕ್ ಡೌನ್
ನಾಳೆ ಲಾಕ್ಡೌನ್ ಇದ್ದು, ಸುಕಾಸುಮ್ಮನೆ ಯಾರೂ ಓಡಾಡುವಂತಿಲ್ಲ ಎಂದು ಚಿಕ್ಕಮಗಳೂರು ಡಿಸಿ ಬಗಾದಿ ಗೌತಮ್ ಹೇಳಿದ್ದಾರೆ.
ನಾಳೆ ಲಾಕ್ಡೌನ್, ಅಗತ್ಯವಿದ್ದರೆ ಮಾತ್ರ ಹೊರಬನ್ನಿ : ಚಿಕ್ಕಮಗಳೂರು ಡಿಸಿ
ಐದು ಜನರು ಒಟ್ಟಾಗಿ ಸಂಚಾರ ಮಾಡುವಂತಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರ ಬರಬಹುದಾಗಿದ್ದು, ತಮ್ಮ ಸ್ವಂತ ವಾಹನದಲ್ಲಿ ಹೊರ ಬರಬಹುದು. ಏನೂ ಕೆಲಸವಿಲ್ಲದಿದ್ದರೆ ಹೊರಗೆ ಬರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಪತ್ರಕರ್ತರು ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಅವರಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂದು ಬಗಾದಿ ಗೌತಮ್ ಹೇಳಿದ್ದಾರೆ.