ಚಿಕ್ಕಮಗಳೂರು: ಸರ್ಕಾರ ಹಸಿರು ವಲಯ ಎಂದು ಲಾಕ್ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಅನಗತ್ಯ ವಾಹನ ಸಂಚಾರ ಹೆಚ್ಚಾಗಿದ್ದು, ಸವಾರರಿಗೆ ದಂಡ ವಿಧಿಸಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
ಗ್ರೀನ್ ಝೋನ್ನಲ್ಲಿ ಮಿತಿ ಮೀರಿದ ವಾಹನ ಸಂಚಾರ: ರಸ್ತೆಗಿಳಿದ ಪೊಲೀಸರು - ಚಿಕ್ಕಮಗಳೂರಿನಲ್ಲಿ ಲಾಕ್ಡೌನ್ ಸಡಿಲಿಕೆ
ಚಿಕ್ಕಮಗಳೂರು ನಗರದಲ್ಲಿ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಮನಬಂದಂತೆ ಬೀದಿಗಿಳಿದ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 3 ಗಂಟೆಯಲ್ಲಿ ನೂರಾರು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಗ್ರೀನ್ ಝೋನ್ನಲ್ಲಿ ಮಿತಿಮೀರಿದ ವಾಹನ ಸಂಚಾರ
ಗ್ರೀನ್ ಝೋನ್ನಲ್ಲಿ ಮಿತಿ ಮೀರಿದ ವಾಹನ ಸಂಚಾರ
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಅನಗತ್ಯ ತಿರುಗಾಡುವ ಕಾರ್, ಬೈಕ್ ಸವಾರರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.
ನಗರದಲ್ಲಿ 3 ಗಂಟೆಯಲ್ಲೇ ನೂರಾರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಗೆ ಪೊಲೀಸರು ಶಾಕ್ ನೀಡಿದ್ದಾರೆ.