ಕರ್ನಾಟಕ

karnataka

ETV Bharat / state

'ಯಾವ ಅಸಂಘಟಿತ ಕಾರ್ಮಿಕನಿಗೂ ಇನ್ನೂ ಒಂದ್ರುಪಾಯಿ ನೆರವು ಸಿಕ್ಕಿಲ್ಲ..': ಲಾಕ್​ಡೌನ್​ ವಿಶೇಷ ಸುದ್ದಿ ಸರಣಿ - ಲಾಕ್​ಡೌನ್​ ಸಮಸ್ಯೆಗಳು

ಹಲವಾರು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಲಾಕ್​ಡೌನ್​ನಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ಪ್ರಮುಖವಾಗಿ ಚಿಕ್ಕಮಗಳೂರಿನ ಕಟ್ಟಡ ಕಾರ್ಮಿಕರು, ಹಮಾಲಿಗಳು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು, ಲಾರಿ ಮಾಲೀಕರು, ಟೈಲರ್​ಗಳು ಪರದಾಡುವಂತಾಗಿದೆ.

lockdown problem
ಲಾಕ್​ಡೌನ್​ ಸಮಸ್ಯೆ

By

Published : Apr 12, 2020, 11:55 AM IST

ಚಿಕ್ಕಮಗಳೂರು:ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ವರ್ಗದ ನೌಕರರಿಗೆ ನೆರವು ನೀಡೋಕೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರಿಗೆ ಇರುವ ಕಡೆಗಳಲ್ಲೇ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಲಾಕ್​ಡೌನ್​ ಘೋಷಣೆಯಾದ ನಂತರ ಸುಮಾರು 206 ವಲಸೆ ಕಾರ್ಮಿಕರನ್ನು ಗುರ್ತಿಸಲಾಗಿದ್ದು, ಇವರಲ್ಲಿ ನೂರಕ್ಕೂ ಹೆಚ್ಚು ಮಂದಿ ಕಡೂರು- ಚಿಕ್ಕಮಗಳೂರು ರಸ್ತೆ ಕೆಲಸಕ್ಕೆ ಬಂದವರಾಗಿದ್ದಾರೆ. ರಾಮನಹಳ್ಳಿ ಹೋಟೆಲ್​ ಕಾಮಗಾರಿಗೆ ಬಂದಿದ್ದ 42 ಮಂದಿ ಹಾಗೂ ಕನಕಭವನದ ಸಮೀಪ ವಸತಿಗೃಹ ನಿರ್ಮಾಣಕ್ಕೆ ಬಂದಿದ್ದ 22 ಮಂದಿಯನ್ನು ಗುರ್ತಿಸಿ ದಿನಸಿ ಕಿಟ್ ನೀಡಲಾಗಿದೆ. ಅವರ ಆರೋಗ್ಯ ರಕ್ಷಣೆಗಾಗಿ ಮಾಸ್ಕ್, ಸ್ಯಾನಿಟೈಸರ್ ಕೂಡ ಒದಗಿಸಲಾಗಿದೆ.

ಲಾಕ್​ಡೌನ್​ ಸಮಸ್ಯೆಗಳು

ಕಾರ್ಮಿಕ ಇಲಾಖೆ ಹೇಳುವುದೇನು?:

ಚಿಕ್ಕಮಗಳೂರಿನಲ್ಲಿ 40,272 ಕಟ್ಟಡ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ನೋಂದಾಯಿತ ಕಾರ್ಮಿಕರಿಗೆ ಸರ್ಕಾರ ಮಾಸಿಕ ಒಂದು ಸಾವಿರ ರೂಪಾಯಿ ಜೀವನ ನಿರ್ವಹಣಾ ವೆಚ್ಚ ನೀಡುತ್ತಿದೆ. ಈ ರೀತಿ ಜೀವನ ನಿರ್ವಹಣಾ ವೆಚ್ಚವನ್ನು ಸದ್ಯಕ್ಕೆ ಜಿಲ್ಲೆಯಲ್ಲಿ 9,600 ಮಂದಿಗೆ ನೀಡಲಾಗುತ್ತಿದೆ. ಉಳಿದವರಿಗೂ ಶೀಘ್ರದಲ್ಲೇ ಹಣ ಬರಲಿದೆ ಎಂದೂ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಜಾನ್ಸನ್ ಹೇಳಿದ್ದಾರೆ.

ಹಮಾಲಿ ಸಂಘದ ವತಿಯಿಂದ ನೆರವು:

3 ಸಾವಿರಕ್ಕೂ ಅಧಿಕ ಹಮಾಲಿಗಳು ಚಿಕ್ಕಮಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರಲ್ಲಿ ಕೇವಲ 500 ಜನರಿಗೆ ಮಾತ್ರ ಕಾರ್ಡ್ ಮಾಡಿಕೊಡಲಾಗಿದೆ. ಈಗಾಗಲೇ ಹಮಾಲಿ ಸಂಘದ ವತಿಯಿಂದ ಸಂಘಟಿತ ಸದಸ್ಯರಿಗೆ ಒಂದು ಸಾವಿರ ಹಣ ಹಾಗೂ ದಿನನಿತ್ಯದ ವಸ್ತುಗಳನ್ನು ನೀಡಲಾಗಿದೆ. ಅಸಂಘಟಿತ ಹಮಾಲಿಗಳಿಗೆ ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದು, ಈವರೆಗೂ ಸರ್ಕಾರದ ವತಿಯಿಂದ ಹಮಾಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಸಹಾಯ ಮಾಡಿಲ್ಲ ಎಂದೂ ಹಮಾಲಿ ಸಂಘದ ಅಧ್ಯಕ್ಷರ ಮಾತು.

ತಲೆಮೇಲೆ ಕೈಹೊತ್ತು ಕುಳಿತ ಲಾರಿ ಚಾಲಕರು:

2 ಸಾವಿರಕ್ಕೂ ಅಧಿಕ ಲಾರಿಗಳು ಕಳೆದ 20 ದಿನಗಳಿಂದ ನಿಂತಲ್ಲೇ ಈ ಲಾರಿಗಳು ನಿಂತಿವೆ. ಶೇಕಡಾ 10ರಷ್ಟು ಲಾರಿಗಳನ್ನು ಸರ್ಕಾರವೇ ತರಕಾರಿ, ದಿನಸಿ ಹಾಗೂ ಪಡಿತರ ನೀಡಲು ಬಳಸಿಕೊಳ್ಳುತ್ತಿದೆ. ಆದರೆ ಮಿಕ್ಕ ಲಾರಿಗಳ ಮಾಲೀಕರು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದು, ಬದುಕನ್ನು ನಡೆಸಲು ಲಾರಿಯನ್ನೇ ನಂಬಿದವರು ದಿಕ್ಕು ತೋಚದಂತಾಗಿದ್ದಾರೆ. ರೈತರೂ ಬೆಳೆಗಳನ್ನು ಬೆಳೆದ ಬೆಳೆಗಳು ಕೂಡಾ ತೋಟದಲ್ಲೇ ಕೊಳೆಯುತ್ತಿವೆ.

ಟೈಲರ್​ಗಳ ಸ್ಥಿತಿ ಶೋಚನೀಯ:

ಇನ್ನು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಪ್ರತಿದಿನ 200ರಿಂದ 300 ರೂಪಾಯಿ ದುಡಿಯುತ್ತಿದ್ದ ಟೈಲರ್​ಗಳ ಸ್ಥಿತಿ ಶೋಚನೀಯವಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾಫಿ ತೋಟ ಇದ್ದು, ಅಲ್ಲಿನ ಕಾರ್ಮಿಕರನ್ನು ತೋಟದ ಮಾಲೀಕರೇ ನೋಡಿಕೊಳ್ಳುತ್ತಿದ್ದಾರೆ. ತಪ್ಪಿಸಿಕೊಂಡು ಹೋಗುತ್ತಿದ್ದ ಸುಮಾರು 50 ಕಾರ್ಮಿಕರನ್ನು ಮೂಡಿಗೆರೆ ಹಾಗೂ ಎನ್.ಆರ್.ಪುರ ತಾಲೂಕಿನ ಹಾಸ್ಟೆಲ್​ ಹಾಗೂ ಶಾಲೆಗಳಲ್ಲಿ ಇಟ್ಟು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗಿದೆ.

ABOUT THE AUTHOR

...view details