ಚಿಕ್ಕಮಗಳೂರು :ದೇಶಾದ್ಯಂತ ಚೀನಿ ವಸ್ತುಗಳಿಗೆ ಬಹಿಷ್ಕಾರ ಮಾಡುವ ಆಂದೋಲನವೊಂದು ಹುಟ್ಟಿಕೊಂಡ ಬೆನ್ನಲ್ಲೆ ಜಿಲ್ಲೆಯಲ್ಲಿಯೂ ಚೀನಿ ವಸ್ತುಗಳ ಬಹಿಷ್ಕಾರಕ್ಕೆ ದೊಡ್ಡಮಟ್ಟದ ಬೆಂಬಲ ಸಿಗುತ್ತಿದೆ.
ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಲೈಫ್ಲೈನ್ ಫೀಡ್ಸ್ ಸಂಸ್ಥೆ ಬೆಂಬಲ - boycott of Chinese goods
ದೇಶದ ಸೈನಿಕರ ಹತ್ಯೆ ಹಿನ್ನೆಲೆಯ ಪ್ರತಿಕಾರವಾಗಿ ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಅಭಿಯಾನವೊಂದು ಪ್ರಾರಂಭವಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಸಂಸ್ಥೆಯೊಂದು ಇದಕ್ಕೆ ಬೆಂಬಲ ಸೂಚಿಸಿದೆ.
ಸಂಗ್ರಹ ಚಿತ್ರ
ಜಿಲ್ಲೆಯ ಹೆಸರಾಂತ ಲೈಫ್ಲೈನ್ ಫೀಡ್ಸ್ ಕಂಪನಿಯಿಂದ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವ ಯೋಚನೆ ಮಾಡಿದ್ದು, ಮೇಡ್ ಇನ್ ಚೀನಾ ವಸ್ತುಗಳನ್ನು ಬಳಸದಿರಲು ನಿರ್ಧಾರಕ್ಕೆ ಕಂಪನಿಯವರು ಬಂದಿದ್ದಾರೆ.
ಕೆಲ ಜಿಲ್ಲೆಗಳಲ್ಲಿರುವ ತಮ್ಮ ಸಂಸ್ಥೆಗಳಲ್ಲಿ ಚೀನಿ ವಸ್ತುಗಳಿಗೆ ಗೇಟ್ ಪಾಸ್ ನೀಡಿದ್ದು, ದೇಶದ ಜನರ ಜನಾಂದೋಲನಕ್ಕೆ ಲೈಫ್ಲೈನ್ ಫೀಡ್ಸ್ ಸಂಸ್ಥೆ ಬೆಂಬಲ ಸೂಚಿಸಿ ಪ್ರಕಟಣೆ ಹೊರಡಿಸಿದೆ.