ಕರ್ನಾಟಕ

karnataka

ETV Bharat / state

ಬಿಜೆಪಿ ವಿಧಾನ ಪರಿಷತ್​ ಸದಸ್ಯರಿಗೆ ಕಾಂಗ್ರೆಸ್​ ಶಾಸಕ ಪತ್ರ ಬರೆದಿದ್ಯಾಕೆ? ಇಷ್ಟಕ್ಕೂ ಅಂಥದ್ದೇನಿದೆ?

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೆ ಬರೆದಿರುವ ವಿಶೇಷ ಪತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Congress Legislator letter
ಬಿಜೆಪಿ ವಿಧಾನ ಪರಿಷತ್​ ಸದಸ್ಯರಿಗೆ ಕಾಂಗ್ರೆಸ್​ ಶಾಸಕ ಪತ್ರ

By

Published : Dec 3, 2019, 11:19 PM IST

ಚಿಕ್ಕಮಗಳೂರು:ಬಿಜೆಪಿಗೆ ಕಾಂಗ್ರೆಸ್​ ಮುಖಂಡರನ್ನು ಕಂಡರೆ ಆಗುವುದಿಲ್ಲ, ಅದೇ ರೀತಿ ಕಾಂಗ್ರೆಸ್​​​ಗೆ ಬಿಜೆಪಿ ಮುಖಂಡರನ್ನು ಕಂಡರೆ ಆಗುವುದಿಲ್ಲ. ಇದು ನೂರಕ್ಕೆ ನೂರು ನಿಜ. ಆದರೆ, ಬಿಜೆಪಿಯ ವಿಧಾನ ಪರಿಷತ್​ ಸದಸ್ಯರೊಬ್ಬರಿಗೆ ಕಾಂಗ್ರೆಸ್​ ಶಾಸಕರೊಬ್ಬರು ಪತ್ರ ಬರೆದು ನಾವಿಬ್ಬರು ಆತ್ಮೀಯರು, ಕ್ಷೇತ್ರದ ಅಭಿವೃದ್ಧಿಗೆ ಒಂದಾಗೋಣ ಎಂದಿದ್ದಾರೆ.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೆ ಬರೆದಿರುವ ವಿಶೇಷ ಪತ್ರಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಷ್ಟಕ್ಕೂ ಪತ್ರದಲ್ಲೇನಿದೆ?

ನಾವು ಪ್ರತಿನಿಧಿಸುವ ಪಕ್ಷಗಳು ಬೇರೆ ಬೇರೆ. ಈ ಹಿಂದೆ ಇಬ್ಬರೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದೇವೆ. ರಾಜಕೀಯ ಪಕ್ಷಗಳು ಹೊರತಾಗಿಯೂ ನಾವಿಬ್ಬರು ಆತ್ಮೀಯರು. ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿರುವ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು ಸಹಜ. ಆದರೆ ನನಗೆ ಇಂತಹ ಮೇಲಾಟಗಳಲ್ಲಿ ನಂಬಿಕೆ ಇಲ್ಲ.

ಕಾಂಗ್ರೆಸ್​ ಶಾಸಕ ಬರೆದ ಪತ್ರ

ಈ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಆಡಳಿತ ಪಕ್ಷದ ಪ್ರತಿನಿಧಿಯಾಗಿರುವ ನೀವು ವಿಶೇಷ ಹೆಚ್ಚಿನ ಅನುದಾನ ಒದಗಿಸಬೇಕು. ಕೊಪ್ಪ ತಾಲೂಕಿನಲ್ಲಿ ನನ್ನ ಸಮರ್ಪಣಾ ಕಚೇರಿ, ಎನ್.ಆರ್.ಪುರ ತಾಲೂಕಿನಲ್ಲಿ ಸಮನ್ವಯ ಕಚೇರಿ, ಶೃಂಗೇರಿಯಲ್ಲಿ ಸದ್ಭಾವನ ಕಚೇರಿಗಳಿವೆ. ಈ ಎಲ್ಲವು ಸರ್ಕಾರಿ ಕಟ್ಟಡದಲ್ಲಿಯೇ ಇವೆ.

ಪ್ರತಿ ಸೋಮವಾರ ಕೊಪ್ಪ ಮತ್ತು ಶೃಂಗೇರಿ, ಶನಿವಾರ ಎನ್.ಆರ್.ಪುರ ಕಾರ್ಯಾಲಯಕ್ಕೆ ಭೇಟಿ ನೀಡುತ್ತೇನೆ. ನೀವು ಸಹ ನನ್ನ ಕಚೇರಿಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶೃಂಗೇರಿ ಶಾಸಕರು ತಮ್ಮ ಕಚೇರಿಯನ್ನೇ ಬಿಟ್ಟು ಕೊಡಲು ಮುಂದಾಗಿದ್ದಾರೆ. ಎಲ್ಲ ಶಾಸಕರು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತುಕೊಟ್ಟರೆ, ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಹೇಳುತ್ತಿದ್ದಾರೆ ಜನ.

ABOUT THE AUTHOR

...view details