ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ ಕೇಂದ್ರ​ದ ಸುತ್ತ ಚಿರತೆಗಳ ಕಾಟ... ಕೊರೊನಾ ಶಂಕಿತರಿಗೆ ಹೆಚ್ಚಿದ ಆತಂಕ​! - chikkamagalur latest isolation news

ಕೊರೊನಾ ವೈರಸ್ ಶಂಕಿತರಿಗೆ ಚಿರತೆ ಭಯವೇ ಹೆಚ್ಚಾಗಿ ಕಾಡುತ್ತಿದೆ. ಚಿರತೆ ಹೆಜ್ಜೆ ಗುರುತುಗಳಿಂದ ಕೊರೊನಾ ಶಂಕಿತರು ಆತಂಕಕ್ಕೀಡಾಗಿದ್ದಾರೆ. ಇದರಿಂದಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಮತ್ತೊಂದು ತಲೆನೋವು ಶುರುವಾಗಿದೆ.

leopard
ಐಸೋಲೆಷನ್​ ಸುತ್ತ ಚಿರತೆಗಳ ಕಾಟ.

By

Published : Apr 28, 2020, 2:56 PM IST

ಚಿಕ್ಕಮಗಳೂರು:ನಗರದಲ್ಲಿ ಕೊರೊನಾ ಶಂಕಿತರನ್ನಿರಿಸಿರುವ ಕ್ವಾರಂಟೈನ್​ ಕೇಂದ್ರದ ಸುತ್ತ ಚಿರತೆಗಳು ಓಡಾಡುತ್ತಿವೆ. ಹೀಗಾಗಿ ಈ ಕೇಂದ್ರದಲ್ಲಿರುವವರಿಗೆ ಕೊರೊನಾಕ್ಕಿಂತ ಚಿರತೆ ಭಯವೇ ಹೆಚ್ಚಾಗಿ ಕಾಡುತ್ತಿದೆ.

ಕೊರೊನಾ ವೈರಸ್ ಶಂಕಿತರಿಗೆ ಕೊರೊನಾ ವೈರಸ್​ ಭಯಕ್ಕಿಂತ ಚಿರತೆ ಭಯವೇ ಹೆಚ್ಚಾಗಿ ಕಾಡುತ್ತಿದೆ. ಚಿರತೆ ಹೆಜ್ಜೆ ಗುರುತು ಶಂಕಿತರ ನಿದ್ದೆಗೆಡಿಸಿದೆ. ಇದರಿಂದಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಐಸೊಲೇಷನ್​ ಸುತ್ತ ಚಿರತೆಗಳ ಹೆಜ್ಜೆ ಗುರುತು.

ನಗರದ ಮಧುವನ ಬಡಾವಣೆಯಲ್ಲಿರುವ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡುಬಂದಿವೆ. ಸ್ಥಳಕ್ಕೆ ‌ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details