ಕರ್ನಾಟಕ

karnataka

ETV Bharat / state

ಗೊಬ್ಬರ ತಯಾರಿಕಾ ಘಟಕಕ್ಕೆ ದಿನವೂ ಲಗ್ಗೆ ಇಡುತ್ತಿದೆ ಚಾಲಾಕಿ ಚಿರತೆ.. ಹಿಡಿಯೋಣಾ ಅಂದ್ರೆ ಬಲೂ ಚೂಟಿ! - Cheetah Entrance in Katiganare Village, Ajjampura Taluk

ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದ ಶಿವ ಪ್ರಸಾದ್ ಎಂಬುವವರ ಗೊಬ್ಬರ ತಯಾರಿಕ ಘಟಕಕ್ಕೆ ಚಾಲಾಕಿ ಚಿರತೆಯೊಂದು ನಿತ್ಯವೂ ಭೇಟಿ ನೀಡಿ ಜನರ ನೆಮ್ಮದಿ ಕೆಡಿಸಿದೆ.

leopard-detection-at-katiganare-village-of-chikkamagalore
ಚಿರತೆ

By

Published : Dec 18, 2020, 8:18 PM IST

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದ ಶಿವ ಪ್ರಸಾದ್ ಎಂಬುವರ ಗೊಬ್ಬರ ತಯಾರಿಕ ಘಟಕಕ್ಕೆ ಚಿರತೆಯೊಂದು ನಿತ್ಯ ಭೇಟಿ ಕೊಡುತ್ತಿದೆ.

ಮೊದಲ ದಿನ ಫ್ಯಾಕ್ಟರಿಯಲ್ಲಿದ್ದ ನಾಯಿ ಮರಿಯನ್ನ ಹೊತ್ತೊಯ್ದಿತ್ತು. 2ನೇ ದಿನ ಬೇಟೆ ಸಿಗದೇ ಬರಿಗೈಯಲ್ಲಿ ವಾಪಸ್​​ ಆಗಿತ್ತು. ಒಂದೊಂದು ಜಾಗಕ್ಕೂ ಎಂಟ್ರಿ ಕೊಡೋಕೆ ತನ್ನದೇ ಆದ ಟೈಮಿಂಗ್ಸ್ ಇಟ್ಕೊಂಡಿರೋ ಚಾಲಕಿ ಚಿರತೆ, ಈ ಪ್ಯಾಕ್ಟರಿಗೆ ಮಧ್ಯರಾತ್ರಿ 12.30 ರಿಂದ 2 ಗಂಟೆಯೊಳಗೆ ಎಂಟ್ರಿ ಕೊಡೋ ಅಭ್ಯಾಸವಿಟ್ಟುಕೊಂಡಿದೆ. ಹೇಗಿದ್ರು ಚಿರತೆ ದಿನಾ ಬರ್ತಿದೆ, ಲಾಕ್ ಮಾಡೋಣ ಅಂತ ಬೋನ್ ಇಟ್ರೆ, ಅದರ ಹತ್ತಿರ ಬಂದು ಹುಷಾರಾಗಿ ಹೆಜ್ಜೆ ಹಾಕಿ ಎಸ್ಕೇಪ್​ ಆಗ್ತಿದೆ.

ಗ್ರಾಮಕ್ಕೆ ಚಿರತೆ ಪ್ರವೇಶಿಸಿರುವುದರ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ

ಚಿರತೆ ದಾಳಿ ಕುರಿತು ಆತಂಕದಲ್ಲಿ ಸಾರ್ವಜನಿಕರು

ಕೇವಲ ಕಾಟಿಗನೆರೆ ಗ್ರಾಮದ ಸುತ್ತ ಮುತ್ತ ಮಾತ್ರ ಈ ಚಿರತೆ ಹವಾ ಸೃಷ್ಟಿಸಿಲ್ಲ. ಬದಲಾಗಿ ಕಾಟಿಗನೆರೆ ಅಕ್ಕ ಪಕ್ಕದ ಅಬ್ಬಿನಹೊಳಲು, ಮುಗುಳಿ, ತಮಟದಹಳ್ಳಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲೂ ಹವಾ ಸೃಷ್ಟಿಸಿದ್ದು. ಜನ ಆತಂಕದಲ್ಲಿ ಬದುಕುವಂತಾಗಿದೆ. ಕಾಟಿಗನೆರೆ ಸುತ್ತಮುತ್ತ ಈ ಚಿರತೆ ಸಿಕ್ಕಾಪಟ್ಟೆ ಹವಾ ಇಟ್ಟಿದೆ. ಸಂಜೆ 6 ಆದರೆ ಸಾಕು ಸುತ್ತಮುತ್ತಲಿನ ಗ್ರಾಮದಲ್ಲಿ ಜನರು ಯಾರೂ ಮನೆಯಿಂದ ಹೊರ ಬರಲ್ಲ. ಯಾಕಂದ್ರೆ ಊರೂರು ಸುತ್ತುತ್ತಿರೋ ಈ ಚಿರತೆ ಎಲ್ಲಿ ನಮ್ಮ ಮೇಲೆ ಅಟ್ಯಾಕ್ ಮಾಡುತ್ತೋ ಅನ್ನೋ ಭಯ ಜನರನ್ನ ಪ್ರತಿಕ್ಷಣ ಕಾಡುತ್ತಿದೆ.

ಓದಿ:ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ: ಡಿ. 20ರಿಂದ ಆನ್​ಲೈನ್ ಕ್ಲಾಸ್​​ ಬಂದ್​!

ರಾತ್ರಿಯಿಡೀ ಅಡಿಕೆ - ತೆಂಗಿನ ತೋಟ ಸೇರಿದಂತೆ ಹೊಲಗದ್ದೆಗಳಿಗೆ ನೀರು ಹಾಯಿಸಲು ಓಡಾಡುವ ಜನ ಚಿರತೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಈಗಾಗಲೇ ಹಸು - ಕುರಿ -ನಾಯಿಯನ್ನ ಬಲಿ ತೆಗೆದುಕೊಂಡಿರೋ ಚಿರತೆ ಜನರ ಮೇಲೆ ದಾಳಿ ಮಾಡೋ ಮುನ್ನ ಸೆರೆ ಹಿಡೀರಿ ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.

For All Latest Updates

TAGGED:

ABOUT THE AUTHOR

...view details