ಚಿಕ್ಕಮಗಳೂರು :ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಬೆಕ್ಕು ಸಾವನ್ನಪ್ಪಿರುವ ಘಟನೆ ನಡೆದಿದೆ.
ವಾಹನ ಡಿಕ್ಕಿ: ಮೂಡಿಗೆರೆ ಬಳಿ ಚಿರತೆ ಬೆಕ್ಕು ಸಾವು - ಮೂಡಿಗೆರೆ
ಚಿಕ್ಕಮಗಳೂರಿನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಚಿರತೆ ಬೆಕ್ಕು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿರತೆ ಬೆಕ್ಕು ಸಾವು
ಜಿಲ್ಲೆಯ ಮೂಡಿಗೆರೆ ನಗರದ ಹೊರವಲಯದ ಬಿಳಗೊಳ ಬಳಿಯ ಕೊಲ್ಲಿಬೈಲು ಗ್ರಾಮದ ಬಳಿ ಈ ಘಟನೆ ನಡೆದಿದೆ. ನಿನ್ನೆ ಬಿಳಗೊಳ ಗ್ರಾಮದ ಹೆದ್ದಾರಿ ಹಾಗೂ ಸುತ್ತ ಮುತ್ತ ಪ್ರದೇಶದಲ್ಲಿ ಚಿರತೆ ಮರಿ ಕಾಣಿಸಿಕೊಂಡಿತ್ತು, ಅದೇ ಚಿರತೆ ಇದಾಗಿರಬಹುದೆಂದು ಅನುಮಾನ ವ್ಯಕ್ತವಾಗಿತ್ತು.
ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಡಿಗೆರೆ ಅರಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jun 29, 2019, 9:17 PM IST