ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಒಂದು ವರ್ಷ 'ಪೂರೈಸಿದ' ಕೊರೊನಾ..! - ಚಿಕ್ಕಮಗಳೂರಿನಲ್ಲಿ ಕೋವಿಡ್ ಸೋಂಕಿತರು

ಚಿಕ್ಕಮಗಳೂರಿಗೆ ಕೊರೊನಾ ಕಾಲಿಟ್ಟು ಬರೋಬ್ಬರಿ ಒಂದು ವರ್ಷವಾಗಿದ್ದು, ಈ ಬಾರಿ ಹಿಂದಿನ ಬಾರಿಗಿಂತ ಹೆಚ್ಚು ಆತಂಕ ಸೃಷ್ಟಿಸಿದೆ.

latest-corona-updates-from-chikkamagaluru
ಚಿಕ್ಕಮಗಳೂರಿನಲ್ಲಿ ಒಂದು ವರ್ಷ 'ಪೂರೈಸಿದ' ಕೊರೊನಾ..!

By

Published : May 20, 2021, 1:24 AM IST

ಚಿಕ್ಕಮಗಳೂರು:ಕಾಫಿನಾಡಿಗೆ ಕೊರೊನಾ ಕಾಲಿಟ್ಟು ಒಂದು ವರ್ಷ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಬುಧವಾರ 1,047 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಅಂದು ರಾಜ್ಯದಲ್ಲಿ ಚಿಕ್ಕಮಗಳೂರು ಹಸಿರು ವಲಯದಲ್ಲಿ ಗುರ್ತಿಸಿಕೊಂಡಿದ್ದು, ಮೊದಲು ಕೊರೊನಾ ಪ್ರಕರಣ ಪತ್ತೆಯಾಗಿದ್ದು ಹಿಂದಿನ ವರ್ಷ 19 ಮೇ ತಿಂಗಳಿನಲ್ಲಿ.

ಇದನ್ನೂ ಓದಿ:ಕೊನಾರ್ಕ್ ದೇವಾಲಯ ಮೇ 31ರವರೆಗೆ ಪ್ರವಾಸಿಗರಿಗೆ ಬಂದ್

ಕಳೆದ ವರ್ಷ ಮೊದಲ ಅಲೆಯಲ್ಲಿ ಅಂದರೆ 7 ತಿಂಗಳಲ್ಲಿ ಸುಮಾರು 12,400 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದರು. ಈಗ ಎರಡನೇ ಅಲೆಯಲ್ಲಿ ಕೇವಲ ಎರಡು ತಿಂಗಳಲ್ಲಿ 20,177 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಕಳೆದ ವರ್ಷ 7 ತಿಂಗಳಲ್ಲಿ 147 ಮಂದಿ ಸಾವನ್ನಪ್ಪಿದ್ದರೆ, ಎರಡನೇ ಅಲೆಯಲ್ಲಿ 206 ಮಂದಿ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸುಮಾರು 7 ಸಾವಿರ ಸಕ್ರಿಯ ಪ್ರಕರಣಗಳಿದ್ದು, ಎರಡು ಸಾವಿರಕ್ಕೂ ಅಧಿಕ ಹೋಮ್ ಐಸೋಲೇಶನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details