ಕರ್ನಾಟಕ

karnataka

ETV Bharat / state

ಹೊರನಾಡಿಗೆ ತೆರಳುತ್ತಿದ್ದಾಗ ಜೀಪ್ ಪಲ್ಟಿ: ಚಾಲಕಿ ಸ್ಥಳದಲ್ಲೇ ಸಾವು - ಈಟಿವಿ ಭಾರತ ಕನ್ನಡ

ಜೀಪ್ ಪಲ್ಟಿಯಾಗಿ ಚಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಹೊರನಾಡು ಸಮೀಪ ನಡೆದಿದೆ.

lady-driver-died-in-jeep-accident-near-horanadu
ಹೊರನಾಡಿಗೆ ತೆರಳುತ್ತಿದ್ದಾಗ ಜೀಪ್ ಪಲ್ಟಿ: ಚಾಲಕಿ ಸ್ಥಳದಲ್ಲೇ ಸಾವು

By

Published : Nov 23, 2022, 8:13 PM IST

ಚಿಕ್ಕಮಗಳೂರು: ಜೀಪ್ ಪಲ್ಟಿಯಾಗಿ ಚಾಲಕಿ ಮೃತಪಟ್ಟ ಘಟನೆ ಜಿಲ್ಲೆಯ ಹೊರನಾಡು ಸಮೀಪ ಸಂಭವಿಸಿದೆ. ಕಳಸ ತಾಲೂಕಿನ ಹೊಸಗದ್ದೆಯ ಧರ್ಮೇಂದ್ರ ಶೆಟ್ಟಿ ಅವರ ಪತ್ನಿ ಅಕ್ಷತಾ(35) ಮೃತ ಮಹಿಳೆ.

ಜೀಪ್ ಪಲ್ಟಿ

ಬುಧವಾರ ಸಂಜೆ ಹೊಸಗದ್ದೆಯ ತಮ್ಮ ಮನೆಯಿಂದ ಹೊರನಾಡಿಗೆ ಸ್ವತಃ ಅವರೇ ಜೀಪ್ ಚಾಲನೆ ಮಾಡಿಕೊಂಡು ಹೊರಟಿದ್ದರು. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಹಳ್ಳದ ಬಳಿ ಬರುವಾಗ ಜೀಪ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಜೀಪ್​ನಲ್ಲಿ ಅವರೊಬ್ಬರೇ ಇದ್ದರು ಎಂದು ತಿಳಿದುಬಂದಿದೆ.

ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಮಹಿಳೆಯನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ, ಜೀವ ಉಳಿಸಲಾಗಿಲ್ಲ. ಮಾಹಿತಿ ತಿಳಿದ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ನರಗುಂದದಲ್ಲಿ ಭೀಕರ ಅಪಘಾತ: ಬೆಂಕಿ ಹೊತ್ತಿಕೊಂಡ ವಾಹನಗಳು, ಓರ್ವ ಸ್ಥಳದಲ್ಲೇ ಸಾವು

ABOUT THE AUTHOR

...view details