ಕರ್ನಾಟಕ

karnataka

ETV Bharat / state

ಅಧಿಕಾರ ಇಲ್ಲದಿರುವುದರಿಂದ ಮೀನನ್ನು ನೀರಿನಿಂದ ಹೊರ ತೆಗೆದಂತಾಗಿದೆ: ಸಿಟಿ ರವಿ ವಿರುದ್ಧ ಶಾಸಕ ತಮ್ಮಯ್ಯ ವ್ಯಂಗ್ಯ - ಸಿ ಟಿ ರವಿ

ಸಿ ಟಿ ರವಿ ಅಧಿಕಾರ ಕಳೆದುಕೊಂಡ ಮೇಲೆ ವಿಲ ವಿಲ ಅಂತ ಒದ್ದಾಡುತ್ತಿದ್ದಾರೆ. ಆಕಾಶದ ಮೇಲೆ ಹಾರಾಡುತ್ತಿದ್ದರು, ಭೂಮಿ ಮೇಲೆ ನಡೆಯುತ್ತಿರಲಿಲ್ಲ.ಸಾಮಾನ್ಯ ಜನ, ದೀನದಲಿತರು ಬದುಕಿನ ಬಗ್ಗೆ ನೆನಪೇ ಇರಲಿಲ್ಲ. 19 ವರ್ಷದ ಬಳಿಕ ಬಡವರು ದೀನದಲಿತರ ಬಗ್ಗೆ ಎಚ್ಚರ ಆಗಿದೆ ಅಲ್ಲ. ಖುಷಿ ಇದೆ ಎಂದು ಶಾಸಕ ಹೆಚ್ ಡಿ ತಮ್ಮಯ್ಯ

MLA HD Thammaiah spoke at the press conference.
ಶಾಸಕ ಹೆಚ್ ಡಿ ತಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By

Published : May 30, 2023, 10:57 PM IST

Updated : May 30, 2023, 11:04 PM IST

ಶಾಸಕ ಹೆಚ್ ಡಿ ತಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಿಕ್ಕಮಗಳೂರು:ಅಧಿಕಾರ ಇಲ್ಲದಿರೋದು ಮೀನನ್ನು ನೀರಿನಿಂದ ಹೊರ ತೆಗೆದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಜಿ ಶಾಸಕ ಸಿ ಟಿ ರವಿ ಅವರನ್ನು ಚಿಕ್ಕಮಗಳೂರು ಶಾಸಕ ಹೆಚ್ ಡಿ ತಮ್ಮಯ್ಯ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.

ಮಾಧ್ಯಮದವರ ಜತೆಗೆ ಮಾತನಾಡಿದ ಅವರು,ಸಿ ಟಿ ರವಿ ಅವರು 10 ವರ್ಷದಿಂದ ಅಂಡಾ - ಬಂಡಾ ಅಧಿಕಾರದಲ್ಲಿ ಇದ್ದರು. ಅಧಿಕಾರ ಕಳೆದುಕೊಂಡು ವಿಲ - ವಿಲ ಅಂತ ಒದ್ದಾಡುತ್ತಿದ್ದಾರೆ. ಅವರು ಆಕಾಶದ ಮೇಲೆ ಹಾರಾಡುತ್ತಿದ್ದರು, ಭೂಮಿ ಮೇಲೆ ನಡೆಯುತ್ತಿರಲಿಲ್ಲ.ಅವರು ನನಗೆ ಅಭಿವೃದ್ಧಿ ವಿಚಾರವಾಗಿ ಪತ್ರ ಬರೆದಿದ್ದಾರೆ, ಅವರ ಪತ್ರದ ಬಗ್ಗೆ ನನಗೆ ಖುಷಿ ಇದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಾಮಾನ್ಯ ಜನರು, ದೀನದಲಿತರು ಬದುಕಿನ ಬಗ್ಗೆ ನೆನಪೇ ಇರಲಿಲ್ಲ.19 ವರ್ಷದ ಬಳಿಕ ಬಡವರು ದೀನದಲಿತರ ಬಗ್ಗೆ ಎಚ್ಚರ ಆಗಿದೆ ಅಲ್ಲ. ಖಂಡಿತ ಕಾಫಿ ತೋಟದ ಸಾಹುಕಾರನ ಮಗನಾಗಿ ಹುಟ್ಟಿಲ್ಲ. ಸಾಮಾನ್ಯ ರೈತನಾಗಿ ಹುಟ್ಟಿದ್ದೇನೆ. ಅವರಿಗಿಂತ ನನಗೆ ಸಾಮಾನ್ಯ ಜನರ ಬಗ್ಗೆ ಕಾಳಜಿ ಇದೆ ಎಂದು ತಿಳಿಸಿದರು.

ಸಿಟಿ ರವಿ ಅವರಿಗೆ 19 ವರ್ಷಗಳ ಬಳಿಕ ಜನರ ಬಗ್ಗೆ ಕಾಳಜಿ ಬಂದಿರೋದು ಸಂತೋಷ. ಆದರೆ ಕೆಲಸ ಚೆನ್ನಾಗಿದ್ದರೆ ಯಾರೇ ಕಂಟ್ರಾಕ್ಟರ್ ಆಗಿದ್ರು ನನ್ನ ತಕರಾರಿಲ್ಲ. ಕಾಮಗಾರಿ ಚೆನ್ನಾಗಿಲ್ಲ ಅಂದ್ರೆ ಸಂಬಂಧಿಕರೇ ಆದನ್ನು ಒಪ್ಪಲ್ಲ. ಕಾಮಗಾರಿ ಚೆನ್ನಾಗಿಲ್ಲ ಎಂದರೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಬಿಡಲ್ಲ ಎಂದು ಕಟುವಾಗಿ ಟೀಕಿಸಿದರು.

ಈಗಲೂ ನಾನೂ ಆರ್​​​ಎಸ್ಎಸ್ ಸಂಘದ ಸ್ವಯಂ ಸೇವಕ:ನಾನು ಕಾಂಗ್ರೆಸ್​ ಪಕ್ಷದ ಶಾಸಕನಾಗಿದ್ದರೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿಕೆ ನೀಡಿದ್ದು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು.

ತೇಗೂರು ಗ್ರಾಮದಲ್ಲಿ ಜಿಲ್ಲಾ ಸಾಮಿಲ್ ಮಾಲೀಕರು ಹಾಗೂ ಟಿಂಬರ್ ವ್ಯಾಪಾರಿಗಳ ಸಂಘದಿಂದ ಸನ್ಮಾನ ಸ್ವೀಕರಿಸುವ ವೇಳೆ ಮಾತನಾಡಿದ್ದ ಅವರು , ನಾನು ಹಿಂದೆ 16 ವರ್ಷಗಳ ಕಾಲ ಬಿಜೆಪಿಯಲ್ಲಿದ್ದೆ, ಈಗಲೂ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಶಿಸ್ತು ಕಲಿಸಿದೆ ನಾನು ಸಂಘದ ಸ್ವಯಂ ಸೇವಕ, ನಾನು ಜಾತ್ಯತೀತ ವ್ಯಕ್ತಿ ಈ ನಿಟ್ಟಿನಲ್ಲೇ ಪ್ರಮಾಣವಚನವನ್ನು ಸ್ವೀಕರಿಸಿದ್ದೇನೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಶಾಂತಿ ಸೌಹಾರ್ದತೆ ಕಾಪಾಡುವುದು ನನ್ನ ಮೊದಲ ಆದತ್ಯೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣ: ಸಿ ಟಿ ರವಿ -ಅತಿಯಾದ ಆತ್ಮವಿಶ್ವಾಸ, ಹೊಸ ಪ್ರಯೋಗ ಸೋಲಿಗೆ ಕಾರಣವಾಯಿತು. ಸೋತ ಮಾತ್ರಕ್ಕೆ ನಾನು ಮನೆಯಲ್ಲಿ ಕೂರುವುದಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಸೋಲಿನ ಕಾರಣಗಳನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು "ನಾವು ಕೆಲಸ ಮಾಡಿಲ್ಲ ಅಂತ ಸೋತಿಲ್ಲ. ಸುಳ್ಳು ಸುದ್ದಿ ಹಾಗೂ ಹಣ ಕೊಟ್ಟು ಮಾಡಿಸಿದ ಸುದ್ದಿ ಈ ರೀತಿಯ ಫಲಿತಾಂಶ ಕೊಟ್ಟಿದೆ. ಚುನಾವಣೆಯಲ್ಲಿ ಸೋತಿರಬಹುದು, ಆದರೆ ನಾವು ಸತ್ತಿಲ್ಲ ಎಂದು ಕಾರ್ಯಕರ್ತರು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದರು. ಪಕ್ಷ ಸಂಘಟನೆಗಾಗಿ ಸದಾ ಮುಂದಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂಓದಿ:ಇಂದು ರಾತ್ರಿ ಡಿಕೆಶಿ ಬೆಳಗಾವಿಗೆ ಭೇಟಿ: ನಾಳೆ ಸವದಿ, ಶೆಟ್ಟರ್​ ಭೇಟಿ ಮಾಡಲಿರುವ ಡಿಸಿಎಂ...!

Last Updated : May 30, 2023, 11:04 PM IST

ABOUT THE AUTHOR

...view details