ಚಿಕ್ಕಮಗಳೂರು:ಜಿಲ್ಲೆಯಲ್ಲಿ ಅಡಿಕೆ ಮರದ ಮೇಲಿಂದ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಅಡಿಕೆ ಮರಗಳಿಗೆ ಜೌಷಧಿ ಸಿಂಪಡಣೆ ಮಾಡುವ ವೇಳೆ ಅವಘಡ ನಡೆದಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಈ ದುರಂತ ನಡೆದಿದೆ. ತೋಟದ ಕಾರ್ಮಿಕ ಜಯೇಂದ್ರ (35) ಮೃತ ದುರ್ದೈವಿಯಾಗಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಭಾರೀ ಮಳೆಯಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಜಯೇಂದ್ರ ಆಶ್ರಯ ಪಡೆದುಕೊಂಡಿದ್ದ.