ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ವಿದ್ಯುತ್​ ಅವಘಡದಲ್ಲಿ ಕಾರ್ಮಿಕ ಸಾವು - labor died due to current shok in chikkamgaluru

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರದೀಪ್ ಎಂಬುವವರ ಕಾಫಿ ತೋಟದಲ್ಲಿ ವಿದ್ಯುತ್​ ಅವಘಡದಿಂದ ಕೂಲಿ ಕಾರ್ಮಿಕ ಮೃತಪಟ್ಟಿದ್ದಾನೆ.

labor died due to current shok in chikkamgaluru
ವಿದ್ಯುತ್​ ಅವಘಡದಲ್ಲಿ ಕಾರ್ಮಿಕ ಸಾವು

By

Published : May 5, 2020, 10:46 PM IST

ಚಿಕ್ಕಮಗಳೂರು: ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿದ ಪರಿಣಾಮ ಅಸ್ಸಾಂ ಮೂಲದ ಯುವಕ ಕಾಫಿ ತೋಟದಲ್ಲಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ವಿದ್ಯುತ್​ ಅವಘಡದಲ್ಲಿ ಕಾರ್ಮಿಕ ಸಾವು

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರದೀಪ್ ಕುಮಾರ್ ಎಂಬುವವರ ಕಾಫಿ ತೋಟದಲ್ಲಿ ಆಜ್ಗರ್ (18) ಎಂಬಾತ ಸಾವನಪ್ಪಿದ್ದಾನೆ. ಇಂದು ಕಾಫಿ ತೋಟದಲ್ಲಿ ಅಲ್ಯೂಮಿನಿಯಂ ಏಣಿ ಬಳಸಿ ಮೆಣಸು ಕತ್ತರಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಏಣಿ ತಗುಲಿದೆ.

ಏಣಿ ಮೂಲಕ ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳದಲ್ಲಿಯೇ ಕೂಲಿ ಕಾರ್ಮಿಕ ಸಾವನಪ್ಪಿದ್ದಾನೆ. ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details